ಪಶ್ಚಿಮ ಬಂಗಾಳ: ಆಯುಧ ಪೂಜೆ ಅಂಗವಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌ನಲ್ಲಿರುವ ಸುಕ್ನಾ ವಾರ್ ಸ್ಮಾರಕದಲ್ಲಿ ‘ ಶಸ್ತ್ರಾಸ್ತ್ರಗಳಿಗೆ ಪೂಜೆ’ ನೆರವೇರಿಸಿದರು.
ಈ ವೇಳೆ ಮಾತನಾಡಿದ ಅವರು, ಇಂಡೋ-ಚೀನಾ ಗಡಿ ಉದ್ವಿಗ್ನತೆ ಕೊನೆಗೊಳ್ಳಬೇಕು ಮತ್ತು ಶಾಂತಿ ಕಾಪಾಡಬೇಕು ಎಂದು ಭಾರತ ಬಯಸಿದೆ. ಅಲ್ಲದೆ, ನಮ್ಮ ಸೈನ್ಯವು ನಮ್ಮ ಭೂಮಿಯನ್ನು ಒಂದು ಇಂಚು ಸಹ ತೆಗೆದುಕೊಳ್ಳಲು ಬಿಡುವುದಿಲ್ಲ ಎಂದು ನನಗೆ ವಿಶ್ವಾಸವಿದೆ ಎಂದರು.
ಉತ್ತರ ಸಿಕ್ಕಿಂನ ಭಾರತ್ಮಾಲಾ ಯೋಜನೆಯಡಿ ‘ಮಂಗನ್-ಚುಗ್ತಾಂಗ್-ಯುಮ್ಸೆಮ್ಡಾಂಗ್’ ಮತ್ತು ‘ಚುಗ್ಥಾಂಗ್-ಲಾಚೆನ್-ಜಿಮಾ-ಮೊಗುಥಾಂಗ್-ನಕುಲಾ’ ಗೆ 225 ಕಿ.ಮೀ ಡಬಲ್ ಲೇನ್ ರಸ್ತೆಯ ನಿರ್ಮಾಣವನ್ನು ಯೋಜಿಸಲಾಗಿದೆ. ಈ ಕಾರ್ಯಗಳನ್ನು 9 ಪ್ಯಾಕೇಜ್‌ಗಳಲ್ಲಿ ಯೋಜಿಸಲಾಗಿದ್ದು, 5710 ಕೋಟಿ ರೂ.ಗಳ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ ಎಂದು ಹೇಳಿದರು.
ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನಾರವಾನೆ ಉಪಸ್ಥಿತರಿದ್ದರು.

