ದೊಡ್ಡಬಳ್ಳಾಪುರ: ಬೆಂಗಳೂರು ಪದವೀಧರ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಶಿಕ್ಷಕರು ಸಮೀಪದಲ್ಲೇ ಮತಚಲಾಯಿಸಲು ಅನುಕೂಲವಾಗುವಂತೆ ತಾಲ್ಲೂಕಿನ ಐದು ಹೋಬಳಿ ಕೇಂದ್ರದಲ್ಲೂ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ತಹಶೀಲ್ದಾರ್ ಟಿ.ಎಸ್.ಶಿವರಾಜ್ ತಿಳಿಸಿದ್ದಾರೆ.
ಅವರು ಈ ಬಗ್ಗೆ ಮಾಹಿತಿ ನೀಡಿ, ಮಂಗಳವಾರ ಮಧ್ಯಾಹ್ನವೇ ಎಲ್ಲಾ ಮತಗಟ್ಟೆಗಳಿಗು ಸಿಬ್ಬಂದಿ, ಮತಪೆಟ್ಟಿಗೆ ತಲುಪಿವೆ. ಬುಧವಾರ ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದೆ ಎಂದರು.
ತಾಲ್ಲೂಕಿನಲ್ಲಿ 677 ಜನ ಮತದಾರರಿದ್ದಾರೆ. ಇದರಲ್ಲಿ 274 ಮಹಿಳೆಯರು, 403 ಪುರುಷರು. ಕಸಬಾ ಹೋಬಳಿ 442, ದೊಡ್ಡಬೆಳವಂಗಲ 65, ಮಧುರೆ 65, ಸಾಸಲು 41, ತೂಬಗೆರೆ 64 ಜನ ಮತದಾರರಿದ್ದಾರೆ.

