ಬೆಂಗಳೂರು: ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯವು ನವೆಂಬರ್ 30ರವರಗೆ ಶಾಲೆಗಳನ್ನು ತೆರೆಯದಂತೆ ಕೇಂದ್ರದ ಆದೇಶಿದೆ.
ಕೋವಿಡ್-19 ವೈರಸ್ ಹರಡುತ್ತಿರುವುದು ಮುಂದುವರೆಯುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಅಕ್ಟೋಬರ್ 30ರವರೆಗೆ ಎಲ್ಲಾ ಶಾಲೆಗಳನ್ನು ಮುಚ್ಚಿರುವಂತೆ ಈ ಹಿಂದೆಯೇ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶಿಸಿತ್ತು. ಪ್ರಸ್ತುತ ಈ ಕ್ರಮವನ್ನು ಕೇಂದ್ರ ಸಚಿವಾಲಯ ಈಗ ಮತ್ತೆ ನವೆಂಬರ್ ಅಂತ್ಯದವರೆಗೂ ಮುಂದೂಡಿ ಸುತ್ತೋಲೆ ಹೊರಡಿಸಿದೆ.
ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯವು ಅಕ್ಟೋಬರ್ 27 ರಂದು ಪುನಃ ಎಲ್ಲಾ ಶಾಲೆಗಳು, ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳನ್ನು ದಿನಾಂಕ 30-11-2020 ರವರೆಗೆ ಮುಚ್ಚುವಂತೆ ಆದೇಶಿಸಿರುವ ಹಿನ್ನೆಲೆಯಲ್ಲಿ ಎಲ್ಲಾ ಶಾಲೆಗಳನ್ನು ನವೆಂಬರ್ 30ರವರೆಗೆ ತೆರೆಯದಂತೆ ಆದೇಶ ನೀಡಿದೆ.
( ಸಾಂದರ್ಭಿಕ ಚಿತ್ರ ಬಳಸಲಾಗಿದೆ )

