ಬೆಂಗಳೂರು: ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಕಳಲಘಟ್ಟ ಗ್ರಾಮಪಂಚಾಯಿತಿ ವತಿಯಿಂದ “ಸ್ವಚ್ಚೋತ್ಸವ – ನಿತ್ಯೋತ್ಸವ” ಮಾಸಾಚರಣೆ ಪ್ರಯುಕ್ತ ಘನ ತ್ಯಾಜ್ಯ ಸಂಗ್ರಹಣೆಗೆ ಡಸ್ಟ್ ಬಿನ್ ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಜಿಲ್ಲಾ IEC ಸಮಾಲೋಚಕ ರವಿರಾಜ್.ಎಂ, ಸ್ವಚ್ಛ ಭಾರತ್ ಮಿಷನ್ ಗ್ರಾಮೀಣ ಮತ್ತು ಜಲ ಜೀವನ ಮಿಷನ್ ಯೋಜನೆಯಡಿಯಲ್ಲಿ ಒಣ ಕಸ ಹಸಿ ಕಸ ವಿಂಗಡಣೆ, ಹಸಿ ಕಸದಿಂದ ಗೊಬ್ಬರ ತಯಾರಿಕೆ ವಿಧಾನಗಳು ಕುರಿತು ಜನರಿಗೆ ಮಾಹಿತಿ ನೀಡಿದರು.ಅಲ್ಲದೆ ಮಳೆನೀರು ಕೊಯ್ಲು ಅಳವಡಿಕೆ ಮತ್ತು ಶುದ್ಧ ಕುಡಿಯುವ ನೀರಿನ ಮಹತ್ವ, ಶೌಚಾಲಯ ಬಳಕೆ, ಕೆರೆ ಕುಂಟೆ ಗಳ ನಿರ್ಮಾಣದಿಂದ ಬೋರ್ ವೆಲ್ ರಿಚಾರ್ಜ್ ಗೊಳ್ಳುವಿಕೆ, ಪರಿಸರ ಸಂರಕ್ಷಣೆ ವಿಷಯಗಳ ಕುರಿತು ವಿವರಿಸಿದರು.
ಇದೇ ವೇಳೆ ಕಳಲಘಟ್ಟ ಗ್ರಾಮಪಂಚಾಯಿತಿ ವ್ಯಾಪ್ತಿಯ ತೋಟದಹಳ್ಳಿ ಗ್ರಾಮದಲ್ಲಿ “ಸ್ವಚ್ಚೋ ತ್ಸವ – ನಿತ್ಯೋತ್ಸವ” ಮಾಸಾಚರಣೆ ಪ್ರಯುಕ್ತ ಸ್ಮಶಾನದಲ್ಲಿ 50 ಸಸಿಗಳನ್ನು ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ನಟರಾಜುವಹಿಸಿದ್ದರು, ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಿ.ಗೀತಾಮಣಿ, ಸ್ವಸಹಾಯ ಮಹಿಳಾ ಸಂಘಟನೆ ಸದಸ್ಯರು, ಸ್ವಾಮಿ ವಿವೇಕಾನಂದ ಯೂತ್ ಮೊಮೆಂಟ್ ಸಂಸ್ಥೆ ಸದಸ್ಯರು ,ಮತ್ತು ಪಂಚಾಯತಿ ಸಿಬ್ಬಂದಿಗಳು ಇದ್ದರು.

