ಬೆಂಗಳೂರು: ದೊಡ್ಡಬಳ್ಳಾಪುರ ತಾಲೂಕು ಶಾಸಕ ಟಿ.ವೆಂಕಟರಮಣಯ್ಯ ಅವರಿಗೆ ಕರೊನಾ ಸೋಂಕು ದೃಢಪಟ್ಟಿರುವ ಕಾರಣ ಹೋಂ ಹೈಸೋಲೇಷನ್ ಒಳಗಾಗಿದ್ದಾರೆ.
ಈ ಕುರಿತು ಹರಿತಲೇಖನಿ ಮಾಹಿತಿ ನೀಡಿರುವ ಅವರು, ಸ್ವಲ್ಪ ಮಟ್ಟದ ಸೋಂಕಿನ ಲಕ್ಷಣಗಳು ಕಂಡುಬಂದ ಹಿನ್ನೆಲೆಯನ್ನು ಟೆಸ್ಟ್ ಮಾಡಿಸಿದ್ದು, ಫಲಿತಾಂಶದಲ್ಲಿ ಸೋಂಕು ದೃಢಪಟ್ಟಿದೆ. ಆರೋಗ್ಯ ಸ್ಥಿರವಾಗಿದ್ದು ಜನತೆ ಆತಂಕಕ್ಕೆ ಒಳಗಾಗುವ ಬೇಡ ಎಂದಿದ್ದಾರೆ.
ಇದೇ ವೇಳೆ ಮುಂದಿನ 15 ದಿನಗಳ ಕಾಲ ತಮ್ಮ ಭೇಟಿಗೆ ಮುಖಂಡರು ಹಾಗೂ ಜನತೆ ಬರಬಾರದೆಂದು ಎಂದು ಮನವಿ ಮಾಡಿದ್ದಾರೆ. ಹಾಗೂ ಸಂಪರ್ಕದಲ್ಲಿದ್ದವರು ಕೂಡಲೇ ಕರೊನಾ ಸೋಂಕು ತಪಾಸಣೆಗೆ ಒಳಗಾಗಿ ಆರೋಗ್ಯ ಕಾಪಾಡಿಕೊಳ್ಳಲು ಮುಂಜಾಗ್ರತೆ ವಹಿಸುವಂತೆ ಸಲಹೆ ನೀಡಿದ್ದಾರೆ.

