ಬೆಂಗಳೂರು: ಪಬ್ಜಿ ಮೊಬೈಲ್ ಹಾಗೂ ಪಬ್ಜಿ ಮೊಬೈಲ್ ಲೈಟ್ ಅಧಿಕೃತವಾಗಿ ಭಾರತದ ಬಳಕೆದಾರರಿಗೆ ತನ್ನ ಸೇವೆ ಹಾಗೂ ಆ್ಯಕ್ಸೆಸ್ ಸ್ಥಗಿತಗೊಳಿಸಿದೆ.
ಜೂನ್ನಲ್ಲಿ ತಿಂಗಳಲ್ಲಿ ಕೇಂದ್ರ ಸರ್ಕಾರ, ಭದ್ರತೆ ಹಾಗೂ ಮಾಹಿತಿ ಸೋರಿಕೆಯ ಕಾರಣ ನೀಡಿ 100ಕ್ಕೂ ಅಧಿಕ ಚೀನಿ ಆ್ಯಪ್ಗಳನ್ನ ಬ್ಯಾನ್ ಮಾಡಿತ್ತು. ನಂತರ ಸೆಪ್ಟೆಂಬರ್ 2ರಂದು ಪಬ್ಜಿ ಸೇರಿದಂತೆ ಮತ್ತಷ್ಟು ಆ್ಯಪ್ಗಳನ್ನ ನಿಷೇಧಿಸಿತ್ತು.
ಈ ಆದೇಶದ ಬಳಿಕ ಹಾಗೂ ಕೆಲವು ಕೆಲ ದಿನಗಳ ನಂತರ ಬಹುತೇಕ ಆ್ಯಪ್ಗಳ ಸೇವೆ ಸ್ಥಗಿತಗೊಂಡಿದ್ದವು. ಆದರೆ ಪಬ್ಜಿ ಈಗಾಗಲೇ ಇನ್ಸ್ಟಾಲ್ ಮಾಡಿಕೊಂಡಿದ್ದವರಿಗೆ ಇಲ್ಲಿವರೆಗೂ ಗೇಮಿಂಗ್ ಆ್ಯಕ್ಸೆಸ್ ಲಭ್ಯವಿತ್ತು. ಆದರೆ ಇಂದಿನಿಂದ ಭಾರತದಲ್ಲಿ ಸಂಪೂರ್ಣವಾಗಿ ತನ್ನ ಗೇಮಿಂಗ್ ಆ್ಯಕ್ಸೆಸ್ ನಿಲ್ಲಿಸುವುದಾಗಿ ಪಬ್ಜಿ ಘೋಷಿಸಿದೆ.

