ದೊಡ್ಡಬಳ್ಳಾಪುರ: ಶಾಂತಿದೂತ ಮಾನವತಾವಾದಿ ವಿಶ್ವ ಪ್ರವಾದಿ ಮಹಮದ್ ಪೈಗಂಬರ್ ಜನ್ಮ ದಿನಾಚರಣೆ ಅಂಗವಾಗಿ ತಾಲೂಕಿನಲ್ಲಿ ಈದ್ ಮಿಲಾದ್ ಆಚರಣೆ ಸಡಗರದಿಂದ ನಡೆಯಿತು.
ಈ ಬಾರಿ ಕೊವಿಡ್-19 ಹಿನ್ನಲೆಯಲ್ಲಿ ಮೆರವಣಿಗೆ ನಡೆಯಲಿಲ್ಲ. ಮಸೀದಿಗಳಲ್ಲಿ ಸೀಮಿತ ಮಂದಿಯೊಂದಿಗೆ ಅಂತರ ಕಾಪಾಡಿಕೊಂಡು ಪ್ರಾರ್ಥನೆ ಸಲ್ಲಿಸಲಾಯಿತು.
ಮುಸ್ಲಿಂ ಬಾಂಧವರು ಪರಸ್ಪರ ಈದ್ ಶುಭಾಶಯಗಳನ್ನು ಕೋರುವ ಮೂಲಕ ಸಂಭ್ರಮಿಸಿದರು. ಮಸೀದಿಗಳಲ್ಲಿ ಮೌಲೀದ್ ಹಾಗೂ ಕುರಾನ್ ಪಾರಾಯಣ ಆಚರಣೆ ನಡೆಯಿತು.
ಈದ್ ಮಿಲಾದ್‌ನಂದು ಮಸೀದಿಗಳಲ್ಲಿ ಪ್ರವಚನಗಳನ್ನು ಏರ್ಪಡಿಸಿ ಪ್ರವಾದಿಯವರ ಬಗ್ಗೆ ಮಾಹಿತಿಯನ್ನು ಮತ್ತು ಆಚರಿಸುವ ಬಗೆಯನ್ನು ವಿವರಿಸಲಾಗುತ್ತದೆ. ಈ ಬಾರಿ ಸಾಂಕೇತಿಕವಾಗಿ ಮಸೀದಿಗಳಲ್ಲಿ ಪ್ರಾರ್ಥನೆ ನಡೆಸಲಾಯಿತು.

