ಬೆಂಗಳೂರು: ಚಾಲೆಂಜರ್ಸ್ ಯೂತ್ ಫೋರಂ ಸಂಘಟನೆವತಿಯಿಂದ ದೊಡ್ಡಬಳ್ಳಾಪುರ ತಾಲ್ಲೂಕಿನ ಹುಲುಕುಡಿ ಬೆಟ್ಟದ ತಪ್ಪಲಿನಲ್ಲಿ ಸಸಿಗಳನ್ನು ನೆಡುವ ಮೂಲಕ 65ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.
ಸಂಘಟನೆಯ ಸಂಸ್ಥಾಪಕ ಹಾಗೂ ರಾಜ್ಯ ಅಧ್ಯಕ್ಷ ಡಾ. ಸುನಿಲ್ ಕುಮಾರ್ ಮಾತನಾಡಿ, ಸಂಟನೆಯ ಯುವಪಡೆ ಯುವಕರಿಗೆ ಸ್ಪೂರ್ತಿದಾಯಕ ಕಾರ್ಯಕ್ರಮಗಳನ್ನು ಆಯೋಜಿಸಿ ಮಾದರಿಯಾಗಬೇಕಿದೆ. ಅಂತಹ ಜನಪರ ಕಾರ್ಯಗಳಿಗೆ ಸಾರ್ವಜನಿಕರ ಬೆಂಬಲ ಸದಾ ಕಾಲ ದೊರಕುತ್ತದೆ ಎಂದರು.
ಈ ವೇಳೆ ಸಂಘಟನೆಯ ಪದಾಧಿಕಾರಿಗಳಾದ ಮಧು, ಅಜಯ್ ಕುಮಾರ್, ವೀರೇಶ್ ಯಾದವ್, ನಂದಿನಿ, ಸುಹಾಸ್, ಉಮೇಶ್, ಲಕ್ಷ್ಮಿಪತಿ ಮತ್ತಿತರರು ಹಾಜರಿದ್ದರು.

