ದೊಡ್ಡಬಳ್ಳಾಪುರ: ಕನ್ನಡ ರಾಜ್ಯೋತ್ಸವದ ಅಂಗವಾಗಿ ತಾಲೂಕು ವೈದ್ಯಾಧಿಕಾರಿಗಳ ಕಚೇರಿಯ ನವೀಕರಣ ಮತ್ತು ಪುರಾತನ ಚಿತ್ರಕಲೆಯಿಂದ ಗೋಡೆಗಳನ್ನು ಚಿತ್ರಿಸಲಾಗಿದೆ.
ವಾತ್ಸಲ್ಯಧಾಮ ಚಾರಿಟಬಲ್ ಟ್ರಸ್ಟ್ ಮತ್ತು ನವೋದಯ ಚಾರಿಟಬಲ್ ಟ್ರಸ್ಟ್ ಸಂಯೋಗದೊಂದಿಗೆ ಈ ಕಾರ್ಯವನ್ನು ಕೈಗೊಳ್ಳಲಾಗಿದ್ದು, ಆಸ್ಪತ್ರೆಯ ಚಿತ್ರಣದಿಂದ ಕಟ್ಟಡ ಹೊರಬಂದಿದೆ.
ಈ ವೇಳೆ ಮಾತನಾಡಿದ ತಾಲೂಕು ಅರೋಗ್ಯ ಅಧಿಕಾರಿ ಡಾ.ಪರಮೇಶ್ವರ್, ಕೋವಿಡ್ 19 ಎಂಬ ಮಹಾಮಾರಿಯಿಂದ ರಕ್ಷಿಸಿಕೊಳ್ಳಲು ಸ್ವಚತೆಯು ಬಹು ಮುಖ್ಯವಾಗಿದೆ. ಇಂದಿನ ದಿನಗಳಲ್ಲಿ ಕೋವಿಡ್ ಮಹಾಮಾರಿಯು ಪ್ರಪಂಚದಾದ್ಯಂತ ಬೇರು ಬಿಟ್ಟಿದ್ದು, ಈ ಬೇರನ್ನು ಕಿತ್ತೊಗೆಯಲು ಸ್ವಚತೆಯು ಬಹು ಮುಖ್ಯವಾಗಿದೆ.
ಕನ್ನಡ ರಾಜ್ಯೋತ್ಸವ ಅಂಗವಾಗಿ ವಾತ್ಸಲ್ಯ ಧಾಮ ಚಾರಿಟಬಲ್ ಟ್ರಸ್ಟ್ ಮತ್ತು ನವೋದಯ ಚಾರಿಟಬಲ್ ಟ್ರಸ್ಟ್ ಸಹಯೋಗದೊಂದಿಗೆ ನಮ್ಮ ಕಚೇರಿಯ ಗೋಡೆಗಳಿಗೆ ಚಿತ್ತಾರ ಮೂಡಿಸಿ ಶ್ರಮದಾನ ಹಾಗೂ ಸ್ವಚ್ಛತಾ ಕಾರ್ಯಕ್ರಮವನ್ನು ಸ್ವಯಂಪ್ರೇರಿತರಾಗಿ ಮುಂದೆ ಬಂದು ಮಾಡಿರುವುದು ಅತ್ಯಂತ ಶ್ಲಾಘನೀಯವಾಗಿದೆ. ಮುಂದಿನ ದಿನಗಳಲ್ಲಿ ನಗರದಾದ್ಯಂತ ಇಂತಹ ಸಂಘ ಸಂಸ್ಥೆಗಳ ಮುಖಾಂತರ ಸ್ವಚ್ಛತಾ ಕಾರ್ಯಕ್ರಮವನ್ನು ಸ್ವಯಂಪ್ರೇರಿತರಾಗಿ ಮಾಡಬೇಕಿದೆ ಎಂದು ಸಲಹೆ ನೀಡಿದರು.
ಈ ವೇಳೆ ವಾತ್ಸಲ್ಯದಮಾ ಚಾರಿಟಬಲ್ ಟ್ರಸ್ಟ್ ನ ಗೌರವಾಧ್ಯಕ್ಷೆ ಟಿ.ಈ.ಲೀಲಾವತಿ, ಅಧ್ಯಕ್ಷ ವೈ.ಎನ್.ಅರ್ಜುನ್,ಉಪಾಧ್ಯಕ್ಷೆ ಸವಿತಾ ಪ್ರಧಾನ ಕಾರ್ಯದರ್ಶಿ ಆರ್.ಮಧುಸೂದನ್, ಖಜಾಂಚಿ ಕೆ. ಪವನ್ ಕುಮಾರ್, ನಿರ್ದೇಶಕರಾದ ಹರ್ಷಿತ, ಕಿಶನ್, ರೇಖಾ, ಮನೋಜ್ , ಗಗನ ಜಿ ಕೃಷ್ಣ, ದೀಕ್ಷಾ, ದನುಜ ಹಾಗೂ ನವೋದಯ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ನವೋದಯ ಚೇತನ್ ಮತ್ತು ಜನಾರ್ಧನ್ ಉಪಸ್ಥಿತರಿದ್ದರು.

