ದೊಡ್ಡಬಳ್ಳಾಪುರ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ 2005ನೇ ಸಾಲಿನ ವಿದ್ಯಾರ್ಥಿಗಳ ವೃಂದಕ್ಕೆ ಉತ್ತಮ ವಿದ್ಯಾರ್ಥಿ ತಂಡದ ಗೌರವ ದೊರೆಯಲಿದೆ.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕುವೆಂಪು ಸಾಭಾಂಗಣದಲ್ಲಿ ನಡೆದ 2005 ಸಾಲಿನ ವಿದ್ಯಾರ್ಥಿಗಳ ವತಿಯಿಂದ ಗುರುವಂದನ ಗುರುವಂದನಾ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಎನ್.ಶ್ರೀನಿವಾಸಯ್ಯ ಈ ಕುರಿತು ಘೋಷಿಸಿದ್ದಾರೆ.
ಕಾರ್ಯಕ್ರಮದಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ವಿಶ್ರಾಂತ ಹೆಚ್ಚುವರಿ ನೀರ್ದೆಶಕರಾದ ಪ್ರೊ.ಎಸ್.ಪಿ.ರಾಜಣ್ಣ ಮಾತನಾಡಿ. ಈ ಸಾಲಿನ ವಿದ್ಯಾರ್ಥಿಗಳು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಗಾಗಲೆ 100 ವಿವಿಧ ಜಾತಿ ಗಿಡಗಳನ್ನು ನೆಟ್ಟಿ ಅವುಗಳ ಬೆಳವಣಿಗೆಗೆ ಪಣ ತೊಟ್ಟಿರುವುದು ಶ್ಲಾಘನೀಯ ಮತ್ತು ಸಮಾಜ ಮುಖಿ ಕೆಲಸ ಮತ್ತು ಈ ಕೆಲಸವು ಹೀಗೆ ಮುಂದುವರೆಯಲ್ಲಿ ಎಂದರು.
ಪ್ರಾದ್ಯಾಪಕ ಡಾ.ಸದಾಶಿವ ರಾಮಚಂದ್ರ ಗೌಡ ಮಾತಾನಾಡಿ, ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿ ಜೀವನವನ್ನು ನೆನೆಸಿಕೊಳ್ಳುವ ಗೊಜಿಗೆ ಹೊಗಲಾರದ ಸ್ಥಿತಿ ಇದ್ದು, ಅದರೆ ಸುದಿರ್ಘ 15 ವರ್ಷಗಳ ನಂತರ ಈ ವಿದ್ಯಾರ್ಥೀಗಳು ತಮ್ಮ ಪ್ರಾದ್ಯಾಪಕರನ್ನು ಇವತ್ತು ನೆನೆದು ಬರಮಾಡಿಕೊಂಡು ನೀಡಿರುವ ಗೌರವ ಬೆಲೆ ಕಟ್ಟಲಾಗದು ಎಂದರು.
ಕಾರ್ಯಕ್ರಮದಲ್ಲಿ ಸಮಾಜವಿಜ್ಞಾನ ಪ್ರಾದ್ಯಾಪಕ ಪ್ರೊ.ಶಂಕುತಲಾ,ವಿಶ್ರಾಂತ ಆರ್ಥಶಾಸ್ತ್ರ ಪ್ರಾದ್ಯಾಪಕಿ ಪ್ರೊ.ಸುಲೋಚನ ಕೋರೆ ಮಾತನಾಡಿದರು.
ಈ ವೇಳೆ ಭೌತಶಾಸ್ತ್ರ ಪ್ರಾದ್ಯಾಪಕ ಡಾ.ಎಂ.ಸತೀಶ್, ಇಂಗ್ಲೀಷ್ ವಿಭಾಗದ ಡಾ.ಎಮ್.ವಿ.ಸಿದ್ದರಾಮರಾಜು ಮತ್ತು ದೇವನಹಳ್ಳಿ ದೇವರಾಜು, ಆಂತಾರಾಷ್ಟ್ರೀಯ ಯೋಗದಲ್ಲಿ ಉತ್ತಮ ಸಾದನೆ ಮಾಡಿರುವ ಹಳೇ ವಿದ್ಯಾರ್ಥಿ ಗೀತ ಮತ್ತು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸಮಾಜವಿಜ್ಞಾನ ವಿಷಯದಲ್ಲಿ ಮೊದಲ ರ್ಯಾಂಕ್ ಪಡೆದಿರುವ ಟಿ.ಪ್ರಕಾಶ್ ರನ್ನು ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ವಸಂತ್, ಪ್ರವಿಣ್, ವಿರೂಪಾಕ್ಷ, ರಾಜೇಂದ್ರ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

