ದೊಡ್ಡಬಳ್ಳಾಪುರ: ನ.8 ರಂದು ನಡೆಯಲಿರುವ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ (ಟಿಎಪಿಎಂಸಿಎಸ್) ಅಂತಿಮ ಉಮೇದುದಾರರ ಪಟ್ಟಿ ಪ್ರಕಟವಾಗಿದ್ದು, 35 ಜನ ಸ್ಪರ್ಧಿಗಳು ಚುನಾವಣೆ ಕಣದಲ್ಲಿ ಉಳಿದಿದ್ದಾರೆ.
13 ಜನ ನಿರ್ದೇಶಕರ ಸ್ಥಾನಗಳನ್ನು ಹೊಂದಿರುವ ಟಿಎಪಿಎಂಸಿಎಸ್‌ನಲ್ಲಿ ‘ಎ’ ತಗತಿಯ 4 ಸ್ಥಾನಗಳಿಗೆ 7 ಜನ ಅಂತಿಮ ಕಣದಲ್ಲಿ ಉಳಿದಿದ್ದಾರೆ. ಬಿಸಿಎಂ ‘ಎ’ 1 ನಿರ್ದೇಶಕ ಸ್ಥಾನಕ್ಕೆ 4 ಜನ, ಬಿಸಿಎಂ ‘ಬಿ’ 1 ನಿರ್ದೇಶಕ ಸ್ಥಾನಕ್ಕೆ 3 ಜನ, ಮಹಿಳಾ ಅಭ್ಯರ್ಥಿಗಳಿಗೆ ಮೀಸಲಾದ 2 ನಿರ್ದೇಶಕ ಸ್ಥಾನಗಳಿಗೆ 5 ಜನ, ಸಾಮಾನ್ಯ ಅಭ್ಯರ್ಥಿಗಳಿಗೆ ಮೀಸಲಾಗಿರುವ 3 ಸ್ಥಾನಗಳಿಗೆ 9 ಜನ, ಎಸ್ಸಿ ಅಭ್ಯರ್ಥಿಗೆ ಮೀಸಲಾಗಿರುವ 1 ಸ್ಥಾನಕ್ಕೆ 4 ಜನ, ಎಸ್ಟಿ ಅಭ್ಯರ್ಥಿಗೆ ಮೀಸಲಾದ 1 ಸ್ಥಾನಕ್ಕೆ 3 ಜನ ಅಭ್ಯರ್ಥಿಗಳು ಅಂತಿಮ ಚುನಾವಣ ಕಣದಲ್ಲಿ ಉಳಿದಿದ್ದಾರೆ. ನ.8 ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮತದಾನ ನಡೆಯಲಿದೆ.

