ಬೆಂಗಳೂರು: ರಾಜರಾಜೇಶ್ವರಿ ಉಪಚುನಾವಣೆಯಲ್ಲಿ ಮತದಾರರು ನನ್ನ ಸೊಸೆಗೆ ಮತ ನೀಡಬೇಕೆಂದು ದಿವಂಗತ ಡಿ.ಕೆ.ರವಿ ತಾಯಿ ಗೌರಮ್ಮ ಮನವಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಪರ ವಿರೋಧ ಸಮರಕ್ಕೆ ಕಾರಣವಾಗಿದೆ.
ಆಕೆ ಕಣ್ಣೀರು ಹಾಕುವುದು ನೋಡಲು ಸಾಧ್ಯವಿಲ್ಲ, ಈ ಹಿಂದೆ ಹೊಟ್ಟೆಯ ಉರಿಯಿಂದ ಏನ್ ಏನೋ ಮಾತಾಡಿದ್ದೆ.ಆಕೆ ಸಹ ನನ್ನ ಮಗಳಂತೆಯೇ ಅವಳ ಜೊತೆ ನಾಲ್ಕೈದು ವರ್ಷ ಬದುಕಿದ್ದೇನೆ. ಆಕೆ ಕಣ್ಣಿರು ಹಾಕುವುದು ನೋಡಿದರೆ ಸಂಕಟವಾಗುತ್ತಿದೆ. ದೇವರ ದಯೆಯಿಂದ ಆಕೆ ಗೆಲ್ಲಬೇಕು ಎಂದಿದ್ದಾರೆ.
ಕುಸುಮಾಗೆ ರಾಜರಾಜೇಶ್ವರಿ ನಗರದ ಅಣ್ಣತಮ್ಮಂದಿರು, ಅಕ್ಕ ತಂಗಿಯರು ಸಹೋದರಿಯಂತೆ ತಿಳಿದು ಮತನೀಡಿ ಗೆಲ್ಲಿಸಿದರೆ ನಾನೂ ಸಹ ಆಕೆಯೊಙದಿಗೆ ಸೇರಿ ನಿಮ್ಮ ಕಷ್ಟಕ್ಕೆ ನೆರವಾಗುತ್ತೇನೆ ಎಂದಿದ್ದಾರೆ.
ಉಪ ಚುನಾವಣೆ ಮುನ್ನ ಕುಸುಮಾ ಸ್ಪರ್ಧೆ ಕುರಿತು ಮಾದ್ಯಮಗಳಿಗೆ ಹೇಳಿಕೆ ನೀಡಿದ್ದ ಗೌರಮ್ಮನವರು ಡಿ.ಕೆ.ರವಿ ಹೆಸರು ಬಳಸಬಾರದು ಹಾಗೂ ಡಿ.ಕೆ.ಪೊಟೋ ಬಳಸಿದರೆ ಬ್ಯಾನರ್ಗೆ ಬೆಂಕಿ ಹಚ್ಚುವುದಾಗಿ ಆಕ್ರೋಶ ವ್ಯಕ್ತಪಡಿಸಿದ್ದರು.
ಕಾಂಗ್ರೆಸ್ ಪಕ್ಷದವರು ಗೌರಮ್ಮ ಕುಸುಮಾ ಪರ ಪ್ರಚಾರ ಮಾಡಿರುವ ವಿಡಿಯೋ ಹರಿಬಿಟ್ಟರೆ, ಬಿಜೆಪಿ ಪಕ್ಷದವರು ಈ ಹಿಂದೆ ಮಾತನಾಡಿದ್ದ ವಿಡಿಯೋ ಜೋಡಿಸಿ ಹಣದ ಮಹಿಮೆ ಎಂದು ಪರ ವಿರೋಧದ ಚರ್ಚೆ ನಡೆಸುತ್ತಿದ್ದಾರೆ.

