ದೊಡ್ಡಬಳ್ಳಾಪುರ: ನಗರದ ಹೊರವಲಯದ ಆರ್.ಎಲ್. ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಉಪನ್ಯಾಸಕ ಕೆ.ಸುನಿಲ್ ಕುಮಾರ್ ಅವರಿಗೆ ಬೆಳಗಾವಿಯ ಪ್ರತಿಷ್ಠಿತ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದಿಂದ ಡಾಕ್ಟರೇಟ್ ದೊರೆತಿದೆ.
ಡಾ.ಪಿ.ಎಲ್.ಶ್ರೀನಿವಾಸ ಮೂರ್ತಿ ರವರ ಮಾರ್ಗದರ್ಶನದಲ್ಲಿ ದಿ ಸ್ಟಡಿ ಆಫ್ ಮೈಕ್ರೊ ಸ್ಟ್ರಕ್ಚರ್ ಆ್ಯಂಡ್ ಕರೋಷನ್ ಬಿಹೇವಿಯರ್ ಆಫ್ ಆರ್ ಆರ್ ಎ ಟ್ರೀಟೆಡ್ 7075 ಆಲ್ ಅಲಾಯ್ ಎಂಬ ವಿಷಯದ ಕುರಿತು ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಪಿಎಚ್ ಡಿ ಪಡೆದಿರುತ್ತಾರೆ.
ಡಾಕ್ಟರೇಟ್ ಪದವಿಗೆ ಭಾಜನರಾದ ಕೆ.ಸುನೀಲ್ ಕುಮಾರ್ ಅವರನ್ನು ಆರ್.ಎಲ್.ಜಾಲಪ್ಪ ಸಮೂಹ ಶಿಕ್ಷಣ ಸಂಸ್ಥೆಯ ನಿರ್ದೇಶಕ ಜೆ.ರಾಜೇಂದ್ರ ಹಾಗೂ ಆರ್.ಎಲ್.ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಶ್ರೀನಿವಾಸ್ ರೆಡ್ಡಿ ಅಭಿನಂದನೆ ಸಲ್ಲಿಸಿದ್ದಾರೆ.

