ಬೆಂಗಳೂರು: ಅರ್ನಬ್ ಗೋಸ್ವಾಮಿ ಅವರ ಬಂಧನವನ್ನು ವಾಕ್ ಸ್ವಾತಂತ್ರ್ಯದ ಮೇಲೆ ನಡೆದ ದಾಳಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ. ಎಲ್. ಸಂತೋಷ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಂಬೈ ಸರ್ಕಾರದ ಕೃತ್ಯವನ್ನು ಇಂದಿರಾ ಸರ್ಕಾರದ ತುರ್ತು ಪರಿಸ್ಥಿತಿ ಸನ್ನಿವೇಶಕ್ಕೆ ಹೋಲಿಸಿರುವ ಅವರು ಮುಂಬೈ ಪೊಲೀಸರು ಉಗ್ರ ಅಜ್ಮಲ್ ಕಸಬ್‌ಗೆ ಬಿರಿಯಾನಿ ತಿನ್ನಿಸಿದ್ದರು. ಆದ್ರೆ, ಇದೀಗ ಅವರನ್ನು ಪ್ರಶ್ನಿಸಿದ ತಪ್ಪಿಗೆ ಮಾಧ್ಯಮಗಳ ಮೇಲೆ ದಾಳಿ ನಡೆಸುತ್ತಿದ್ದಾರೆ.
ವಾಕ್ ಸ್ವಾತಂತ್ರ್ಯದ ಮೇಲೆ ನಂಬಿಕೆ ಇರುವ ಎಲ್ಲರೂ ದನಿ ಎತ್ತುವ ಸಮಯವಿದು ಎಂದು ಸಂತೋಷ್ ಕರೆ ನೀಡಿದ್ದಾರೆ.

