ದೀಪಾವಳಿಗೆ “ಸಿಡಿಯುವ *peta*”ಕಿಗಳು…

ಭರತ ಖಂಡದ ಸಾಂಪ್ರದಾಯಿಕ ಹಬ್ಬಗಳಿಗೆ ಅಸಂಖ್ಯ ಸಹಸ್ರಮಾನಗಳಷ್ಟು ಹಿಂದಿನ ಭವ್ಯ ಇತಿಹಾಸವಿದೆ.ನಮ್ಮ ಸನಾತನ ಹಿಂದೂ ಧರ್ಮದಲ್ಲಿ ಇರುವಷ್ಟು ವೈವಿಧ್ಯಮಯ ಸಾಂಸ್ಕೃತಿಕ-ಸಾಂಪ್ರದಾಯಿಕ ಹಬ್ಬಗಳಷ್ಟು ವಿಶೇಷ ವಿಶ್ವದ ಇತರೆ ಧರ್ಮಗಳಲ್ಲಿ ಖಂಡಿತವಾಗಿಯೂ ಕಾಣಸಿಗುವುದಿಲ್ಲ. ಅಭೇದ್ಯ ಶ್ರೇಷ್ಠ ಇತಿಹಾಸವುಳ್ಳ ಸನಾತನ ಧರ್ಮದ ವೈಶಿಷ್ಟ್ಯವೇ ಅದು…ಇಂತಹ ಸನಾತನ ಧರ್ಮದಲ್ಲಿ ನಮ್ಮ ಕರ್ನಾಟಕದ ಮಟ್ಟಿಗೆ ಹೇಳಬೇಕಾದರೆ ಹತ್ತು ಹಲವು ಹಬ್ಬಗಳಿವೆ…. ಅವೂ ನಮ್ಮ ಪ್ರಕೃತಿಯ ಹಾಗೂ ಸೌರಮಂಡಲದ ಭೌತಿಕ ಬದಲಾವಣೆಗೆ ತಕ್ಕಂತೆ ಬರುವುದು ಬಹಳ ಕುತೂಹಲಕಾರಿ ಅಂಶ…

ಪ್ರಪಂಚದ ಬೇರಾವುದೇ ಧರ್ಮಗಳ ಮೂಲ ಅಸ್ತಿತ್ವವನ್ನು ಸಮರ್ಥಿಸಿಕೊಳ್ಳಲು ಯಾವ ಪುರಾವೆಗಳೂ ಇಲ್ಲ. ಆದರೆ ನಮ್ಮ ಸನಾತನ ಹಿಂದೂ ಧರ್ಮದ ಮೂಲ ಅಸ್ತಿತ್ವವನ್ನು ವಿಶ್ವದೆಲ್ಲೆಡೆಯ ಶತಮಾನಗಳ ಹಿಂದಿನ ವಿಜ್ಞಾನಿಗಳು ಅಲ್ಲದೇ ಆಧುನಿಕ ವಿಜ್ಞಾನಿಗಳು ಸಹ ” ಆಶ್ಚರ್ಯಚಕಿತರಾಗಿ” ಒಪ್ಪಿಕೊಂಡಿದ್ದಾರೆ..

ಆದರೂ ಆಂಗ್ಲರ ಆಳ್ವಿಕೆಯಲ್ಲಿ ಹಿಂದೂ ಧರ್ಮದ ಪಾರಂಪರಿಕ ಸಾರ್ವಭೌಮತ್ವ ಸಹಿಸದೆ ಭವಿಷ್ಯದಲ್ಲಿ ಭಾರತೀಯ ಸಂಸ್ಕೃತಿಯನ್ನು ಭಾರತೀಯರ ಮನಸ್ಸಿನಿಂದ ಹೊರಗೆಡವಲು ವ್ಯವಸ್ಥಿತವಾಗಿ ಸಂಚು ಹೂಡಿ, ಎಲ್ಲಾ ಆಯಾಮಗಳಿಂದಲೂ ಭಾರತೀಯ ಸಂಸ್ಕೃತಿಗೆ  ತದ್ವಿರುದ್ಧವಾದ ಪಾಶ್ಚಾತ್ಯ ಸಂಸ್ಕೃತಿಯನ್ನು ಹೇರಲಾಯಿತು… ಇರಲಿ…., ಈ ಸನಾತನ ಸಂಸ್ಕೃತಿ ಹಾಗೂ ಪಾಶ್ಚಾತ್ಯ ಸಂಸ್ಕೃತಿಗಳ ಬಗ್ಗೆ ಮುಂದಿನ ದಿನಗಳಲ್ಲಿ ವಿಸ್ತೃತವಾಗಿ ಚರ್ಚಿಸೋಣ…

ಈಗ ನಮ್ಮ ಹಿಂದೂ ಸಂಸ್ಕೃತಿಯ ಧಾರ್ಮಿಕ ಹಬ್ಬಗಳತ್ತ ಬರೋಣ...

ನೀವು ಯುಗಾದಿಯಿಂದ ಹಿಡಿದು ಸಂಕ್ರಾಂತಿವರೆಗಿನ ನಮ್ಮ ಯಾವುದೇ ಧಾರ್ಮಿಕ ಹಬ್ಬದ ಬಗ್ಗೆ ಆಳವಾಗಿ ತರ್ಕಿಸಿದಾಗ, ಅದರ ಹಿಂದೆ ಒಂದು ಪ್ರಕೃತಿ ಪೂರಕ (ವೈಜ್ಞಾನಿಕವಾಗಿ ಅಲ್ಲಗಳೆಯಲಾಗದ) ಹಾಗೂ ಪೌರಾಣಿಕ ವೈಶಿಷ್ಟ್ಯ ಇದ್ದೇ ಇರುತ್ತದೆ….

ಕೆಲವು ಉದಾಹರಣೆಗೆ ನೋಡುವುದಾದರೆ…, ಸಂವತ್ಸರದ ಪ್ರಥಮ ಹಬ್ಬ ಯುಗಾದಿ (ಚೈತ್ರ ಮಾಸ) ಸಮಯದಲ್ಲಿ ಹೊಸ ಸಂವತ್ಸರವನ್ನು ಸ್ವಾಗತಿಸುವ ಸಲುವಾಗಿ ನಮ್ಮ ಇಡೀ ಪ್ರಕೃತಿಯೇ ಹಚ್ಚ ಹಸಿರಿನ ಚಿಗುರು ಹೊದ್ದು ಕಂಗೊಳಿಸುತ್ತದೆ…

ನಿಜವಾಗಿಯೂ ಇಡೀ ಸೃಷ್ಠಿಗೆ ಅದೇ ಹೊಸ ವರ್ಷ.ಇನ್ನು ಸಂವತ್ಸರದ ಕೊನೆಯ ಹಂತದಲ್ಲಿ ಬರುವ ಸಂಕ್ರಾಂತಿಯ ವಿಚಾರಕ್ಕೆ ಬಂದರೆ, ಸೌರಮಂಡಲದಲ್ಲಿ ಸೂರ್ಯನು ತನ್ನ ಪಥವನ್ನು ಬದಲಿಸುವ ದಿನವೇ ಉತ್ತರಾಯಣ ಸಂಕ್ರಮಣ ಕಾಲ…

ಹೀಗೆ ಒಂದೊಂದು ಹಬ್ಬಕ್ಕೂ ವೈಜ್ಞಾನಿಕವಾಗಿಯೂ ಸಹ ಅಲ್ಲಗಳೆಯಲಾಗದ ಒಂದೊಂದು ಹಿನ್ನೆಲೆ ಇದೆ. ಹಾಗೆಯೇ ತೆಗೆದುಕೊಂಡರೆ, ದೀಪಾವಳಿ ಸಹ ನಮ್ಮ ಭಾರತದ ಉದ್ದಗಲಕ್ಕೂ, ಪ್ರತಿ ಮನೆಮನೆಯಲ್ಲೂ ಸಂತಸ ಹಾಗೂ ವಿಜೃಂಭಣೆಯಿಂದ ಆಚರಿಸುವ ಹಬ್ಬವಾಗಿದೆ…

ದೀಪಾವಳಿ ಹಬ್ಬಕ್ಕೆ ಸಹಜವಾಗಿ ಎಲ್ಲರ ಮನೆಯಲ್ಲೂ ಲಕ್ಷ್ಮೀದೇವಿಯ ಪೂಜೆ ನೆರವೇರಿಸುವ ಜೊತೆಗೆ ಪ್ರಮುಖವಾಗಿ *ಪಟಾಕಿ* ಸಿಡಿಸಿ ಇಡೀ ಹಿಂದೂಸ್ತಾನದ ಜನತೆ ಸಂಭ್ರಮದಲ್ಲಿ ಮಿಂದೇಳುತ್ತಾರೆ..

ಆದರೆ ಇತ್ತೀಚಿನ ವರ್ಷಗಳಲ್ಲಿ ನಮ್ಮ ಹಬ್ಬಗಳ ಸಾಂಪ್ರದಾಯಿಕ ಆಚರಣೆಗಳನ್ನು ಹಣಿಯುವ ಪ್ರಯತ್ನ ಕೆಲವು so-called ಚಿಂತಕರು ಅಥವಾ ಬುದ್ಧಿಜೀವಿಗಳು ಎನಿಸಿಕೊಂಡಿರುವ ವಾಮಪಂಥೀಯ ವರ್ಗದ ಭಾಗವಾಗಿರುವ ಒಂದು ಸಂಸ್ಥೆಯಿಂದ ನಡೆಯುತ್ತಿರುವುದು ಎಲ್ಲರಿಗೂ ತಿಳಿದ ವಿಚಾರವಾಗಿದೆ…

ಅದಕ್ಕೆ ಪೂರಕವಾಗಿ ಬೆಂಬಲಕ್ಕೆ ನಿಂತಿದ್ದು ದೇಶದ ಹಿಂದೂ ಧರ್ಮದ ಸಾಂಪ್ರದಾಯಿಕ ವಿರೋಧಿಗಳ ಓಲೈಕೆಯಲ್ಲಿ ತೊಡಗಿರುವ ಪಕ್ಷದ ಆಡಳಿತದಲ್ಲಿರುವ/ಇದ್ದ ಸರ್ಕಾರಗಳು. ಆ ಸಂಸ್ಥೆಯ ಹೆಸರೇ ಪೇಟಾ ( PETA= People for the Ethical Treatment of Animals). ಪೇಟಾ ಎಂಬ ಸಂಸ್ಥೆಯು‌ 22/03/1980 ರಂದು ಇಂಗ್ರಿಡ್ ನ್ಯೂಕಿರ್ಕ್ ಎಂಬ ಮಹಿಳೆಯಿಂದ ಅಮೇರಿಕಾದ ಮೇರಿಲ್ಯಾಂಡ್ ರಾಜ್ಯದ ರಾಕ್‌ವಿಲ್ಲೆ ಎಂಬಲ್ಲಿ ಸ್ಥಾಪಿಸಲ್ಪಟ್ಟಿತು.

ಬೀದಿಯಲ್ಲಿ ಅನಾರೋಗ್ಯದಿಂದ ತತ್ತರಿಸುತ್ತಿದ್ದ ಒಂದು ನಾಯಿಯ ರಕ್ಷಣೆ ಮಾಡುವುದರ ಮೂಲಕ ಈ ಸಂಸ್ಥೆ ತನ್ನ ಕಾರ್ಯಚಟುವಟಿಕೆ ಪ್ರಾರಂಭಿಸಿತು…ಹೌದು..‌ ಅದು ಮಾನವೀಯ ದೃಷ್ಟಿಯಿಂದ ತುಂಬಾ ಒಳ್ಳೆಯ ಕೆಲಸ…ಆದರೆ ಅದೇ ಸಂಸ್ಥೆಯ ಭಾರತದ ಸಮಿತಿಯವರು ಮಾಡುತ್ತಿರುವುದಾದರೂ ಏನು…!!??

ದೀಪಾವಳಿ ಹಬ್ಬದಲ್ಲಿ ಪಟಾಕಿ ಸಿಡಿಸಿದರೆ ಪ್ರಾಣಿಹಿಂಸೆ ಆಗುತ್ತದಂತೆ…!!? ದೀಪಾವಳಿ ಜೊತೆಗೆ ನಮ್ಮ ಸಾಂಸ್ಕೃತಿಕ ಕಾರ್ಯಕ್ರಮಗಳಾದ ಜಲ್ಲಿಕಟ್ಟು ಮತ್ತು ಕಂಬಳ ಆಚರಣೆಗಳ ಮೇಲೂ ಈ  Peta ಸಂಸ್ಥೆ ಸೇರಿದಂತೆ ನಮ್ಮ ದೇಶದ so-called ಬುದ್ದಿಜೀವಿಗಳು ನಕಲಿ ಅಹಿಂಸೆಯ ವಿಚಾರ ಎತ್ತಿಕೊಂಡು ಹಿಂದೂ ವಿರೋಧಿ ಅಭಿಯಾನಗಳನ್ನು ನಡೆಸುವುದು ಹೇಯ ಕೃತ್ಯವೇ ಸರಿ.

ಅಷ್ಟಕ್ಕೂ ಈ PETA ಎಂಬ ಸಂಸ್ಥೆಯ ಆರ್ಥಿಕ ಆಧಾರ ಬಹುತೇಕ ಕ್ರಿಶ್ಚಿಯನ್ ಮಿಷಿನರಿ ಸಂಸ್ಥೆಗಳು ಎಂಬುದು *ಬೆತ್ತಲೆ ಸತ್ಯ* .ಅದೆಲ್ಲಾ ಒತ್ತಟ್ಟಿಗಿರಲಿ… ಹಿಂದೂಸ್ತಾನದ ಹಿಂದೂ ಧಾರ್ಮಿಕ ಹಬ್ಬಗಳ ಆಚರಣೆಗಳನ್ನು ವಿರೋಧಿಸುವ ಯಾವ ಯೋಗ್ಯತೆ ಈ ಬುದ್ಧಿಜೀವಿಗಳು ಹಾಗೂ ಈ ಸಂಸ್ಥೆಗಿದೆ!?

ಸಂಜೆ ಐದು ಗಂಟೆಗೆಲ್ಲಾ ಯಾವುದೋ ರೆಸ್ಟೋರೆಂಟ್‌ನ ಟೇಬಲ್ ಮೇಲೆ ಮದ್ಯ ಕುಡಿದು, ಯಾವುದೋ *ಪ್ರಾಣಿಯ ಕತ್ತು ಕೊಯ್ದು* ಬೇಯಿಸಿದ ಮಾಂಸವನ್ನು ಸವಿದು ನಶೆಯೇರಿಸಿಕೊಂಡು ತೇಲಾಡುವ ಇದೇ ಮಂದಿ ನಮಗೆ ನಮ್ಮ ಹಬ್ಬದ ಆಚರಣೆಯ ಸಮಯದಲ್ಲಿ ಅಹಿಂಸೆಯ ಪಾಠ ಮಾಡಲು ಬರುತ್ತಾರೆ. 

ಇಸ್ಲಾಂ ಮೂಲಭೂತವಾದಿಗಳು ರಸ್ತೆಯಲ್ಲಿ ಗೋಮಾತೆಯ ಕೊರಳು ಸೀಳುವಾಗ, ಅನ್ಯ ಧರ್ಮೀಯರು ತಮ್ಮ ಧಾರ್ಮಿಕ ಹಬ್ಬಗಳಿಗೆ ಪ್ರಾಣಿವಧೆ ಮಾಡುವಾಗ ಇವರ ಗಂಜಿ ಕುದಿಯುವುದೇ ಇಲ್ಲ…

ಆಗೆಲ್ಲಾ ನಿರ್ವೀರ್ಯರಾಗಿ ನಪುಂಸಕರಂತೆ ಕೋಣೆ ಸೇರುವ ಇವರುಗಳೆಲ್ಲಾ (ಬುದ್ಧಿಜೀವಿಗಳು, ಕೆಲವು ಚಿತ್ರ ನಟರು, ರಾಜಕಾರಣಿಗಳು ಸೇರಿದಂತೆ) ಒಮ್ಮೆಲೇ ಗಂಜಿ ಕುದಿಯಹತ್ತಿ ರಸ್ತೆಗಿಳಿದು ಗಂಡಸ್ತನ ತೋರಿಸುವುದು ನಮ್ಮ ಹಿಂದೂ ಧರ್ಮದ ಹಬ್ಬಗಳ ಸಮಯದಲ್ಲಿಯೇ ಎಂಬುದು *ಬೆತ್ತಲೆ ಸತ್ಯಕ್ಕೆ ಸುಳ್ಳಿನ ಸೆರಗು* ಮುಚ್ಚಿದಂತೆ ವಾಸ್ತವ ಸತ್ಯ…ಇದಕ್ಕೆಲ್ಲಾ ಕಾರಣ ಏನು ಗೊತ್ತೇ!!?

“ನಮ್ಮ ಧರ್ಮದಲ್ಲಿರುವ ಜಾತಿಪ್ರೇಮಿಗಳ ಆಂತರಿಕ ಭಿನ್ನಹ”.

ಎಲ್ಲಿಯವರೆಗೆ ಹಿಂದೂಗಳು ಒಗ್ಗಟ್ಟನ್ನು ಸಾಬೀತುಪಡಿಸುವುದಿಲ್ಲವೋ.. ಅಲ್ಲಿಯವರೆಗೂ ಹಿಂದುತ್ವದ ಮೇಲೆ ಈ ರೀತಿಯ ವ್ಯವಸ್ಥಿತ ಅತ್ಯಾಚಾರ ನಡೆಯುತ್ತಲೇ ಇರುತ್ತದೆ…

ಅದಕ್ಕಾಗಿ ನಾವುಗಳು ಬಹುಬೇಗ ಜಾತಿಭ್ರಮಣೆಯ ನಿದ್ರೆಯಿಂದ ಎಚ್ಚರಗೊಂಡು, ನಮ್ಮ ಧರ್ಮದ ಬಲವನ್ನು ಜಗತ್ತಿಗೇ ತೋರಿಸುವ ಕಾಲ ಈಗ ಸನ್ನಿಹಿತವಾಗಿದೆ.

ನಾವೆಲ್ಲರೂ ಜಾತಿಬೇಧ ಬಿಟ್ಟು ಒಂದಾಗುವ ಸುದೈವದ ಅವಕಾಶಗಳೆಂದರೆ ಅದು ನಮ್ಮ ಧಾರ್ಮಿಕ ಹಬ್ಬಗಳು ಮಾತ್ರ… ಈ ದೀಪಾವಳಿಗೆ ಗೋಮಯ ದೀಪಗಳನ್ನು ಉರಿಸಿ, ಸ್ವದೇಶೀ ನಿರ್ಮಿತ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸುವ ಮೂಲಕ ಆತ್ಮನಿರ್ಭರ ಸ್ವದೇಶಿ ಅಭಿಯಾನಕ್ಕೆ ಕೈಜೋಡಿಸಿ, ಎಲ್ಲಾ ಹಿಂದೂ ವಿರೋಧಿಗಳ ನಿರೀಕ್ಷೆ ಮೀರಿ ಸೆಡ್ಡು ಹೊಡೆದು, ನಾವೆಲ್ಲರೂ ಒಗ್ಗಟ್ಟು ಪ್ರದರ್ಶಿಸುತ್ತೇವೆ ಎಂಬುದಾಗಿ ಎಲ್ಲರೂ ಒಕ್ಕೊರಲಿನಿಂದ ಈ ಸುಸಂದರ್ಭದಲ್ಲಿ ಸಂಕಲ್ಪ ಮಾಡೋಣ….

ದೀಪಾವಳಿಯ ಶುಭಕಾಮನೆಗಳೊಂದಿಗೆ. ಜಿ.ಎನ್.ಪ್ರದೀಪ್

ಹರಿತಲೇಖನಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ ಪ್ರಮುಖ ಸುದ್ದಿಗಳ ಅಪ್ಡೇಟ್ ಪಡೆಯಿರಿ

ರಾಜಕೀಯ

ನಿಖಿಲ್ ಕಾರ್ಯಕ್ರಮಕ್ಕೆ ದೊಡ್ಡಬಳ್ಳಾಪುರ JDS ಕಾರ್ಯಕರ್ತರ ಆಕ್ರೋಶದ ಬಿಸಿ.?: ಹುಸ್ಕೂರು ಆನಂದ್ ನೇತೃತ್ವದಲ್ಲಿ ಬಿ.ಮುನೇಗೌಡ ಬೆಂಬಲಿಗರ ಸಭೆ..!

ನಿಖಿಲ್ ಕಾರ್ಯಕ್ರಮಕ್ಕೆ ದೊಡ್ಡಬಳ್ಳಾಪುರ JDS ಕಾರ್ಯಕರ್ತರ ಆಕ್ರೋಶದ ಬಿಸಿ.?: ಹುಸ್ಕೂರು ಆನಂದ್ ನೇತೃತ್ವದಲ್ಲಿ

ದೊಡ್ಡಬಳ್ಳಾಪುರ ತಾಲೂಕು ಜೆಡಿಎಸ್ (JDS) ಪಕ್ಷದಲ್ಲಿ ಆಕ್ರೋಶ ಸ್ಪೋಟವಾಗಿದ್ದು, ಬಿ.ಮುನೇಗೌಡ (B.Mine Gowda, ಹುಸ್ಕೂರು ಆನಂದ್ (Huskur Anand), ಬೆಂಬಲಿಗರು ಇಂದು ಸಾಸಲು ಹೋಬಳಿ ಹೊಸಹಳ್ಳಿಯಲ್ಲಿ 500ಕ್ಕೂ ಹೆಚ್ಚು ಮಂದಿ ಕಾರ್ಯಕರ್ತರು ಸಭೆ ಸೇರಿ,

[ccc_my_favorite_select_button post_id="121521"]
ಮಧ್ಯವರ್ತಿಗಳನ್ನು ದೂರವಿಟ್ಟು, ಜನರ ಸಮಸ್ಯೆಗಳನ್ನು ಬಗೆಹರಿಸಿ: ಸಿಎಂ ಸಿದ್ದರಾಮಯ್ಯ ಸೂಚನೆ

ಮಧ್ಯವರ್ತಿಗಳನ್ನು ದೂರವಿಟ್ಟು, ಜನರ ಸಮಸ್ಯೆಗಳನ್ನು ಬಗೆಹರಿಸಿ: ಸಿಎಂ ಸಿದ್ದರಾಮಯ್ಯ ಸೂಚನೆ

ಮಧ್ಯವರ್ತಿಗಳು (Brokers) ಎಲ್ಲೆಡೆ ಇರುತ್ತಾರೆ ಆದರೆ ಅವರನ್ನು ಕಚೇರಿಯೊಳಗೆ ಬಿಟ್ಟುಕೊಳ್ಳದೇ ಹೊರಗೆ ಕಳಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ( Cm Siddaramaiah) ಅಧಿಕಾರಿಗಳಿಗೆ ಸೂಚಿಸಿದರು

[ccc_my_favorite_select_button post_id="121435"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಏನಾಗುತ್ತಿದೆ IPLನಲ್ಲಿ? ಕ್ರಿಕೆಟ್ ಮೈದಾನದಲ್ಲೇ ವೇಪ್ ಸೇವನೆ.. ರಿಯಾನ್ ಪರಾಗ್ ಗೆ ಬಂಧನ ಭೀತಿ.!| Video ನೋಡಿ

ಏನಾಗುತ್ತಿದೆ IPLನಲ್ಲಿ? ಕ್ರಿಕೆಟ್ ಮೈದಾನದಲ್ಲೇ ವೇಪ್ ಸೇವನೆ.. ರಿಯಾನ್ ಪರಾಗ್ ಗೆ ಬಂಧನ

ಐಪಿಎಲ್‌ನ ರಾಜಸ್ಥಾನ್ ರಾಯಲ್ಸ್ (Rajasthan Royals) ತಂಡದ ನಾಯಕ ರಿಯಾನ್ ಪರಾಗ್ (Riyan Parag) ಪಂದ್ಯದ ವೇಳೆ ನಿಷೇಧಿತ 'ಇ-ಸಿಗರೇಟ್' (Vape) ಸೇವಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

[ccc_my_favorite_select_button post_id="121495"]

RCB ಮಾರಾಟ: ವಿಜಯ್ ಮಲ್ಯ ಭಾವುಕ ಸಂದೇಶ

[ccc_my_favorite_select_button post_id="120461"]

RCBಗೆ ಕೆಎಂಎಫ್ ಪ್ರಾಯೋಜಕತ್ವ..!

[ccc_my_favorite_select_button post_id="120424"]

IPL ಟಿಕೆಟ್: ನಕಲಿ ಲಿಂಕ್ ಎಚ್ಚರಿಕೆ

[ccc_my_favorite_select_button post_id="120376"]
ದೊಡ್ಡಬಳ್ಳಾಪುರ: ಸಿಡಿಲು ಬಡಿದು 2 ಹಸುಗಳ ಸಾವು..!

ದೊಡ್ಡಬಳ್ಳಾಪುರ: ಸಿಡಿಲು ಬಡಿದು 2 ಹಸುಗಳ ಸಾವು..!

ಬಿಸಿಲ ಬೇಗೆಯಿಂದ ದೊಡ್ಡಬಳ್ಳಾಪುರ (Doddaballapur) ತಾಲೂಕಿನ ಜನತೆ ತತ್ತರಿಸುತ್ತಿರುವ ನಡುವೆಯೇ ಇಂದು ಮಧ್ಯಾಹ್ನದಿಂದ ತಾಲೂಕಿನ ಹಲವೆಡೆ ಮಳೆಯ ಸಿಂಚನವಾಗಿದೆ.

[ccc_my_favorite_select_button post_id="121471"]
ದೊಡ್ಡಬಳ್ಳಾಪುರ:  ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದೊಡ್ಡಬಳ್ಳಾಪುರ: ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದಾಬಸ್ ಪೇಟೆ ಮಾರ್ಗವಾಗಿ ದೊಡ್ಡಬಳ್ಳಾಪುರ ಕಡೆಗೆ ತೆರಳುತ್ತಿದ್ದ ಕಾರು, ಏಕಾಏಕಿ ಚಾಲಕ ನಿಯಂತ್ರಣ ತಪ್ಪಿ ರಸ್ತೆ ಬದಿಯ ಡಿವೈಡರ್ಗೆ ಡಿಕ್ಕಿ (Accident) ಹೊಡೆದಿದೆ.

[ccc_my_favorite_select_button post_id="121485"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]