ಬೆಂಗಳೂರು: ಜಿದ್ದಾಜಿದ್ದಿ ಪೈಪೋಟಿಗೆ ಕಾರಣವಾಗಿದ್ದ ವಿಧಾನಪರಿಷತ್ ನ ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು ಬಿಜೆಪಿ ಅಭ್ಯರ್ಥಿ ಪುಟ್ಟಣ್ಣ ಜಯಭೇರಿ ಬಾರಿಸಿದ್ದಾರೆ.
ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಪುಟ್ಟಣ್ಣ. ಜೆಡಿಎಸ್ ಅಭ್ಯರ್ಥಿ ಎ.ಪಿ.ರಂಗನಾಥ್ ವಿರುದ್ದ 2228 ಅಧಿಕ ಮತಗಳಿಂದ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಪುಟ್ಟಣ್ಣ ಸತತ ನಾಲ್ಕನೇ ಬಾರಿಗೆ ಜಯ ಸಾಧಿಸಿದ್ದಾರೆ.
ಫಲಿತಾಂಶದಂತೆ ಬಿಜೆಪಿಯ ಪುಟ್ಟಣ್ಣ 7335, ಜೆಡಿಎಸ್ ಪಕ್ಷದ ಎ.ಪಿ.ರಂಗನಾಥ್ 5107, ಪ್ರವೀಣ್ ಪೀಟರ್ 782 ಮತಗಳನ್ನು ಪಡೆದಿದ್ದಾರೆ.
ಸುಶಿಕ್ಷಿತ ಶಿಕ್ಷಕರ 1251 ಮತ ತಿರಸ್ಕೃತ: ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಒಟ್ಟು 14538 ಮತಗಳು ಚಲಾವಣೆಯಾಗಿದ್ದು, 1251 ಮತಗಳು ತಿರಸ್ಕೃತಗೊಂಡಿವೆ. ಸುಶಿಕ್ಷಿತ ಶಿಕ್ಷಕರ ಮತಗಳೆ ತಿರಸ್ಕೃತಗೊಂಡಿರುವುದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಹರಿತಲೇಖನಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ ಪ್ರಮುಖ ಸುದ್ದಿಗಳ ಅಪ್ಡೇಟ್ ಪಡೆಯಿರಿ

