ಜನಪ್ರಿಯ ತೆಲುಗು ನಟ ಮತ್ತು ಮಾಜಿ ಕೇಂದ್ರ ಸಚಿವ ಕೆ.ಚಿರಂಜೀವಿ ಅವರಿಗೆ ಕೋವಿಡ್ -19 ದೃಢಪಟ್ಟಿದೆ ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ. ಆದರೆ ರೋಗಲಕ್ಷಣಗಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಆರೋಗ್ಯ ಪ್ರೋಟೋಕಾಲ್ ಪ್ರಕಾರ ತೆಲುಗು ಚಿತ್ರೋದ್ಯಮದ ಮೆಗಾಸ್ಟಾರ್ ಚಿರಂಜೀವಿ ಅವರು ತಮ್ಮ ಮುಂಬರುವ ಚಿತ್ರ ಆಚಾರ್ಯ ಚಿತ್ರೀಕರಣವನ್ನು ಪುನರಾರಂಭಿಸುವ ಮೊದಲು ಪರೀಕ್ಷೆ ಒಳಗಾಗಿದ್ದೆ “ದುರದೃಷ್ಟವಶಾತ್, ಸೋಂಕು ದೃಢ ಪಟ್ಟಿದೆ.ಆದರೆ ಪ್ರಸ್ತುತ ಯಾವುದೇ ರೋಗಲಕ್ಷಣವಿಲ್ಲವಾದರೂ ಮನೆಯಲ್ಲಿ ಸ್ವಯಂ ಹೋಂಕ್ವಾರಂಟೈನ್ ಗೆ ಒಳಗಾಗಿರುವುದಾಗಿ ” ಅವರು ಹೇಳಿದ್ದಾರೆ.
ಕಳೆದ ಐದು ದಿನಗಳಲ್ಲಿ ತಮ್ಮನ್ನು ಭೇಟಿಯಾದ ಎಲ್ಲರಿಗೂ ಕೋವಿಡ್ -19 ಪರೀಕ್ಷೆಗೆ ಒಳಗಾಗುವಂತೆ ಅವರು ವಿನಂತಿಸಿದ್ದಾರೆ.
ಹರಿತಲೇಖನಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ ಪ್ರಮುಖ ಸುದ್ದಿಗಳ ಅಪ್ಡೇಟ್ ಪಡೆಯಿರಿ

