ಲಂಚ ಕೊಡದಿರುವುದು, ಪಡೆಯದಿರುವುದು ಸಮಾಜಕ್ಕೆ ನೀಡುವ ಕೊಡುಗೆ: ಉಪಲೋಕಾಯುಕ್ತ ಕೆ.ಎನ್.ಫಣೀಂದ್ರ

ಚಿಕ್ಕಬಳ್ಳಾಪುರ,(ನ.08): ಸಾರ್ವಜನಿಕರು ಯಾವುದೇ  ಸರ್ಕಾರಿ  ಕೆಲಸಗಳನ್ನು ಮಾಡಿಸಿಕೊಳ್ಳಲು ಆಡಳಿತ ವರ್ಗಕ್ಕೆ ಲಂಚ ಕೊಡದೇ ಇರುವುದು ಹಾಗೂ ಆಡಳಿತ ವರ್ಗದ ಯಾರೊಬ್ಬರೂ ಲಂಚ ಪಡೆಯದೇ ಕೆಲಸ ನಿರ್ವಹಿಸುವುದೇ ದೇಶಕ್ಕೆ ಮತ್ತು ಸಮಾಜಕ್ಕೆ ನೀವು ನೀಡುವ ನಿಜವಾದ ಪರಸ್ಪರರ  ಕೊಡುಗೆ ಈ ದಿಸೆಯಲ್ಲಿ ಎಲ್ಲರೂ ಸಂಕಲ್ಪ ಮಾಡುವಂತೆ ಉಪಲೋಕಾಯುಕ್ತ ಕೆ.ಎನ್.ಫಣೀಂದ್ರ ಅವರು ಕರೆ ನೀಡಿದರು.

ಅವರು ಸೋಮವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಾರ್ವಜನಿಕ ದೂರು ಅರ್ಜಿಗಳು, ಅಹವಾಲುಗಳ ವಿಲೇವಾರಿ ಮತ್ತು ವಿಚಾರಣೆ ಮಾಡುವ ಮುನ್ನ ಸಾರ್ವಜನಿಕರನ್ನು ಮತ್ತು ಆಡಳಿತ ವರ್ಗವನ್ನು ಉದ್ದೇಶಿಸಿ ಮಾತನಾಡಿದರು.

ಕಳೆದ ಮೂರು ದಿನಗಳಿಂದ ನಾನು ಮತ್ತು ನನ್ನ ಅಧೀನ ಸಹೋದ್ಯೋಗಿಗಳು, ಸಿಬ್ಬಂದಿ  ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿಯೇ ಪ್ರವಾಸ ಕೈಗೊಂಡು ಸಾರ್ವಜನಿಕರ ಅಹವಾಲು ಮತ್ತು ದೂರು ಅರ್ಜಿಗಳನ್ನು ಸ್ವೀಕರಿಸಿ, ಕೆಲವು ಪ್ರಕರಣಗಳಲ್ಲಿ ಅಧಿಕಾರಿಗಳ ಸಮ್ಮುಖದಲ್ಲಿ ಸ್ಥಳದಲ್ಲಿಯೇ ತೀರ್ಮಾನ ಕೈಗೊಂಡು ಇತ್ಯರ್ಥ ಪಡಿಸಲಾಗಿದೆ. ಮತ್ತಷ್ಟು ಪ್ರಕರಣಗಳನ್ನು ಸಮಯ ನಿಗದಿಮಾಡಿ ಇತ್ಯರ್ಥ ಪಡಿಸಲು ಸಹ  ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ. ದುರ್ಬಲರ, ಆರ್ಥಿಕ ಚೈತನ್ಯವಿಲ್ಲದವರ (ಲೋಕಾಯುಕ್ತ ಸಂಸ್ಥೆಯ ವ್ಯಾಪ್ತಿಗೆ ಒಳಪಡದಿರುವ) ಕೆಲವು ಪ್ರಕರಣಗಳನ್ನು ಚಿಕ್ಕಬಳ್ಳಾಪುರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ವರ್ಗಾಯಿಸಿ ಉಚಿತ ಕಾನೂನು ನೆರವಿಗೆ ತಿಳಿಸಲಾಗಿದೆ.

ಅಲ್ಲದೇ ಜಿಲ್ಲಾ ಕೇಂದ್ರದಲ್ಲಿರುವ ಜಿಲ್ಲಾಸ್ಪತ್ರೆ, ಜಿಲ್ಲಾ ಕಾರಾಗೃಹ ಹಾಗೂ ಕೆಲವು ವಿದ್ಯಾರ್ಥಿ ನಿಲಯಗಳಿಗೆ ಭಾನುವಾರ ಭೇಟಿ ಕೊಟ್ಟು ಅಲ್ಲಿನ ಸಾರ್ವಜನಿಕರ, ವಿದ್ಯಾರ್ಥಿಗಳ ಕುಂದುಕೊರತೆಗಳನ್ನು ಆಲಿಸಿ ಸಮಸ್ಯೆಗಳ ಪರಿಹಾರಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಲಾಗಿದೆ. ಈ ಎಲ್ಲಾ ಅಂಶಗಳ ಕುರಿತು ಲೋಕಾಯುಕ್ತ ಸಂಸ್ಥೆಗೆ ವರದಿ ಕಳುಹಿಸಿಕೊಡಲು ಸ್ಪಷ್ಟ ಆದೇಶವನ್ನು ನೀಡಲಾಗಿದೆ. ಈ ಕುರಿತು ಸಂಸ್ಥೆಯು ನಿರಂತರ ನಿಗಾವಹಿಸುತ್ತದೆ ಎಂದು  ತಿಳಿಸಿದರು.

ಈ ಎಲ್ಲಾ ಅಂಶಗಳನ್ನು ಹೊರತು ಪಡಿಸಿ ಕಳೆದ ಮೂರು ದಿನಗಳಿಂದ ನಮ್ಮನ್ನು ಸಂಪರ್ಕಿಸಲು ಸಾಧ್ಯವಾಗದಿರುವ ಜಿಲ್ಲೆಯ  ಯಾವುದೇ ಸಾರ್ವಜನಿಕರು, ಜಿಲ್ಲೆಯ ಯಾವುದೇ ಸರ್ಕಾರಿ ಅಧಿಕಾರಿ ಮತ್ತು ಸಿಬ್ಬಂದಿಯಿಂದ ಹಾಗೂ  ಇತರರಿಂದ ಸರ್ಕಾರಿ ಕೆಲಸ ಮಾಡಿಕೊಡಲು ತೊಂದರೆ ಅನುಭವಿಸಿದ್ದರೆ, ಯಾರಾದ್ರೂ ಲಂಚಕ್ಕೆ ಬೇಡಿಕೆ ಇಟ್ಟಿದ್ದರೆ ಹಾಗೂ ಇತರೆ ಆಮಿಶಗಳನ್ನು ನಿಮ್ಮಿಂದ ಬಯಸಿದ್ದರೆ ಅಂತಹವರ ವಿರುದ್ಧ ಜಿಲ್ಲಾ ಲೋಕಾಯುಕ್ತ ಅಧೀಕ್ಷಕರ ಕಚೇರಿಯನ್ನು ಸಂಪರ್ಕಿಸಿ, ದೂರು ಅರ್ಜಿ ನೀಡಿದರೆ ಲೋಕಾಯುಕ್ತ ಸಂಸ್ಥೆಯು ಕಾನೂನು ಪ್ರಕ್ರಿಯೆ ನಡೆಸಿ ನೊಂದವರಿಗೆ ನ್ಯಾಯ ಒದಗಿಸುತ್ತದೆ.

ಈ ಒಂದು ಮಹೋನ್ನತ ಕಾರ್ಯಕ್ಕೆ ಸಾರ್ವಜನಿಕರು ಲೋಕಾಯುಕ್ತ ಸಂಸ್ಥೆಯನ್ನು ಸದುಪಯೋಗಪಡಿಕೊಳ್ಳುವ ಮೂಲಕ ಸಂಸ್ಥೆಯೊಂದಿಗೆ ಕೈಜೋಡಿಸಬೇಕು. ಮುಖ್ಯವಾಗಿ ನೊಂದವರು ನಿರ್ಭಿತಿಯಿಂದ ಮುಕ್ತವಾಗಿ ಲೋಕಾಯುಕ್ತಕ್ಕೆ  ಅರ್ಜಿ ಸಲ್ಲಿಸಲು ಮುಂದಾಗಬೇಕು. ಸಂಸ್ಥೆಯ ಮೇಲೆ ಸಂಪೂರ್ಣ ನಂಬಿಕೆ ಇಡಬೇಕು. ನೊಂದವರ,  ಅನ್ಯಾಯಕ್ಕೆ ಒಳಗಾದವರ ಬೆಂಬಲಕ್ಕೆ  ಲೋಕಾಯುಕ್ತ ಸಂಸ್ಥೆ ಧೃಡವಾಗಿ ನಿಲ್ಲುತ್ತದೆ ಈ ಬಗ್ಗೆ ಸಂಶಯ ಬೇಡ ಎಂದು ತಿಳಿಸಿದರು.

ಯಾವುದೇ ಸಾರ್ವಜನಿಕರು ಯಾವುದೇ ಸರ್ಕಾರಿ ಕೆಲಸಗಳನ್ನು ಮಾಡಿಸಿ ಕೊಳ್ಳಲು ಯಾವುದೇ ರೂಪದಲ್ಲಿ ಲಂಚವನ್ನು ನೀಡಬಾರದು. ಅದೇ ರೀತಿ ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ಯಾವುದೇ ರೂಪದಲ್ಲಿ ಲಂಚ ಪಡೆಯದೇ ಪ್ರಮಾಣಿಕತೆಯನ್ನು ಮೆರೆಯಬೇಕು. ಇದೇ ದೇಶಕ್ಕೆ ಕೊಡುವ ನಿಜವಾದ ನಿಮ್ಮ ಕೊಡುಗೆ ಈ ದಿಸೆಯಲ್ಲಿ ಎಲ್ಲರೂ ಸಂಕಲ್ಪ ಮಾಡಿ ನೆಡೆದುಕೊಳ್ಳುವಂತೆ ಅಧಿಕಾರಿ ವರ್ಗಕ್ಕೆ ಮತ್ತು ಸಾರ್ವಜನಿಕರಲ್ಲಿ ಮನವಿ ಮಾಡಿದರು. ನಂತರ ದಿನವಿಡೀ ಲೋಕಾಯುಕ್ತ ಸಂಸ್ಥೆಯಲ್ಲಿ ಬಾಕಿ ಇರುವ 67 ಪ್ರಕರಣಗಳನ್ನು ಸುದೀರ್ಘ ವಿಚಾರಣೆ ಮಾಡಿ ವಿಲೇವಾರಿಗೆ  ಉಪಲೋಕಾಯುಕ್ತರು ಪ್ರಯತ್ನ ಮಾಡಿದರು. ಜಿಲ್ಲಾ ಪಂಚಾಯತ್ ನ ವಿಶ್ವೇಶ್ವರಯ್ಯ  ಸಭಾಂಗಣವು ಲೋಕಾಯುಕ್ತ ನ್ಯಾಯಾಲಯದ  ಸಭಾಂಗಣವಾಗಿ ಮಾರ್ಪಟ್ಟಿತ್ತು.

ಉಪಲೋಕಾಯಕ್ತರೇ ಮನೆಬಾಗಿಲಿಗೆ  ಬಂದು ಸಮಸ್ಯೆಗಳನ್ನು ಆಲಿಸಿದಂತೆ  ಭಾಸವಾಗುತ್ತಿತ್ತು. ಅತ್ಯಂತ ತಾಳ್ಮೆಯಿಂದ  ಜನರ ಸಮಸ್ಯೆಗಳನ್ನು ಆಲಿಸಿದರು.

ಇಡೀ ಸಭಾಂಗಣದಲ್ಲಿ ನಿಶಬ್ದ ವಾತಾವರಣ ಮೂಡಿತ್ತು. ಒಟ್ಟಾರೆ ಜಿಲ್ಲೆಯ ಮಟ್ಟಿಗೆ ವಿನೂತನ ಭಾವ ಮೂಡಿಸಿತು.  

ಈ ಸಂದರ್ಭದಲ್ಲಿ ಕರ್ನಾಟಕ ಲೋಕಾಯುಕ್ತದ ಅಪರ ನಿಬಂಧಕರಾದ ಅಮ್ಮನಬಾವಿ, ಉಪನಿಬಂಧಕರಾದ ಚನ್ನಕೇಶವರೆಡ್ಡಿ, ಸಹಾಯಕ ನಿಬಂಧಕರಾದ ಸಿ.ಚಂದ್ರಶೇಖರ್, ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಲಕ್ಷ್ಮೀಕಾಂತ್ ಜೆ. ಮಿಸ್ಕಿನ್, ಜಿಲ್ಲಾಧಿಕಾರಿ ಎನ್.ಎಮ್.ನಾಗರಾಜ್, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯ ನಿರ್ವಾಹಕಾಧಿಕಾರಿ ಪಿ.ಶಿವಶಂಕರ್, ಜಿಲ್ಲೆಯ ಕರ್ನಾಟಕ ಲೋಕಾಯುಕ್ತ ಪೊಲೀಸ್ ಆಧೀಕ್ಷಕರಾದ ಪವನ್ ನೆಜ್ಜೂರ್, ಉಪವಿಭಾಗಾಧಿಕಾರಿ ಡಾ.ಸಂತೋಷ್ ಕುಮಾರ್, ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

ರಾಜಕೀಯ

ನಿಖಿಲ್ ಕಾರ್ಯಕ್ರಮಕ್ಕೆ ದೊಡ್ಡಬಳ್ಳಾಪುರ JDS ಕಾರ್ಯಕರ್ತರ ಆಕ್ರೋಶದ ಬಿಸಿ.?: ಹುಸ್ಕೂರು ಆನಂದ್ ನೇತೃತ್ವದಲ್ಲಿ ಬಿ.ಮುನೇಗೌಡ ಬೆಂಬಲಿಗರ ಸಭೆ..!

ನಿಖಿಲ್ ಕಾರ್ಯಕ್ರಮಕ್ಕೆ ದೊಡ್ಡಬಳ್ಳಾಪುರ JDS ಕಾರ್ಯಕರ್ತರ ಆಕ್ರೋಶದ ಬಿಸಿ.?: ಹುಸ್ಕೂರು ಆನಂದ್ ನೇತೃತ್ವದಲ್ಲಿ

ದೊಡ್ಡಬಳ್ಳಾಪುರ ತಾಲೂಕು ಜೆಡಿಎಸ್ (JDS) ಪಕ್ಷದಲ್ಲಿ ಆಕ್ರೋಶ ಸ್ಪೋಟವಾಗಿದ್ದು, ಬಿ.ಮುನೇಗೌಡ (B.Mine Gowda, ಹುಸ್ಕೂರು ಆನಂದ್ (Huskur Anand), ಬೆಂಬಲಿಗರು ಇಂದು ಸಾಸಲು ಹೋಬಳಿ ಹೊಸಹಳ್ಳಿಯಲ್ಲಿ 500ಕ್ಕೂ ಹೆಚ್ಚು ಮಂದಿ ಕಾರ್ಯಕರ್ತರು ಸಭೆ ಸೇರಿ,

[ccc_my_favorite_select_button post_id="121521"]
ಮಧ್ಯವರ್ತಿಗಳನ್ನು ದೂರವಿಟ್ಟು, ಜನರ ಸಮಸ್ಯೆಗಳನ್ನು ಬಗೆಹರಿಸಿ: ಸಿಎಂ ಸಿದ್ದರಾಮಯ್ಯ ಸೂಚನೆ

ಮಧ್ಯವರ್ತಿಗಳನ್ನು ದೂರವಿಟ್ಟು, ಜನರ ಸಮಸ್ಯೆಗಳನ್ನು ಬಗೆಹರಿಸಿ: ಸಿಎಂ ಸಿದ್ದರಾಮಯ್ಯ ಸೂಚನೆ

ಮಧ್ಯವರ್ತಿಗಳು (Brokers) ಎಲ್ಲೆಡೆ ಇರುತ್ತಾರೆ ಆದರೆ ಅವರನ್ನು ಕಚೇರಿಯೊಳಗೆ ಬಿಟ್ಟುಕೊಳ್ಳದೇ ಹೊರಗೆ ಕಳಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ( Cm Siddaramaiah) ಅಧಿಕಾರಿಗಳಿಗೆ ಸೂಚಿಸಿದರು

[ccc_my_favorite_select_button post_id="121435"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಏನಾಗುತ್ತಿದೆ IPLನಲ್ಲಿ? ಕ್ರಿಕೆಟ್ ಮೈದಾನದಲ್ಲೇ ವೇಪ್ ಸೇವನೆ.. ರಿಯಾನ್ ಪರಾಗ್ ಗೆ ಬಂಧನ ಭೀತಿ.!| Video ನೋಡಿ

ಏನಾಗುತ್ತಿದೆ IPLನಲ್ಲಿ? ಕ್ರಿಕೆಟ್ ಮೈದಾನದಲ್ಲೇ ವೇಪ್ ಸೇವನೆ.. ರಿಯಾನ್ ಪರಾಗ್ ಗೆ ಬಂಧನ

ಐಪಿಎಲ್‌ನ ರಾಜಸ್ಥಾನ್ ರಾಯಲ್ಸ್ (Rajasthan Royals) ತಂಡದ ನಾಯಕ ರಿಯಾನ್ ಪರಾಗ್ (Riyan Parag) ಪಂದ್ಯದ ವೇಳೆ ನಿಷೇಧಿತ 'ಇ-ಸಿಗರೇಟ್' (Vape) ಸೇವಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

[ccc_my_favorite_select_button post_id="121495"]

RCB ಮಾರಾಟ: ವಿಜಯ್ ಮಲ್ಯ ಭಾವುಕ ಸಂದೇಶ

[ccc_my_favorite_select_button post_id="120461"]

RCBಗೆ ಕೆಎಂಎಫ್ ಪ್ರಾಯೋಜಕತ್ವ..!

[ccc_my_favorite_select_button post_id="120424"]

IPL ಟಿಕೆಟ್: ನಕಲಿ ಲಿಂಕ್ ಎಚ್ಚರಿಕೆ

[ccc_my_favorite_select_button post_id="120376"]
ದೊಡ್ಡಬಳ್ಳಾಪುರ: ಸಿಡಿಲು ಬಡಿದು 2 ಹಸುಗಳ ಸಾವು..!

ದೊಡ್ಡಬಳ್ಳಾಪುರ: ಸಿಡಿಲು ಬಡಿದು 2 ಹಸುಗಳ ಸಾವು..!

ಬಿಸಿಲ ಬೇಗೆಯಿಂದ ದೊಡ್ಡಬಳ್ಳಾಪುರ (Doddaballapur) ತಾಲೂಕಿನ ಜನತೆ ತತ್ತರಿಸುತ್ತಿರುವ ನಡುವೆಯೇ ಇಂದು ಮಧ್ಯಾಹ್ನದಿಂದ ತಾಲೂಕಿನ ಹಲವೆಡೆ ಮಳೆಯ ಸಿಂಚನವಾಗಿದೆ.

[ccc_my_favorite_select_button post_id="121471"]
ದೊಡ್ಡಬಳ್ಳಾಪುರ:  ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದೊಡ್ಡಬಳ್ಳಾಪುರ: ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದಾಬಸ್ ಪೇಟೆ ಮಾರ್ಗವಾಗಿ ದೊಡ್ಡಬಳ್ಳಾಪುರ ಕಡೆಗೆ ತೆರಳುತ್ತಿದ್ದ ಕಾರು, ಏಕಾಏಕಿ ಚಾಲಕ ನಿಯಂತ್ರಣ ತಪ್ಪಿ ರಸ್ತೆ ಬದಿಯ ಡಿವೈಡರ್ಗೆ ಡಿಕ್ಕಿ (Accident) ಹೊಡೆದಿದೆ.

[ccc_my_favorite_select_button post_id="121485"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]