ಬೆಂ.ಗ್ರಾ.ಜಿಲ್ಲೆ, (ಡಿ.14): ಬೆಂಗಳೂರು ಗ್ರಾಮಾಂತರ ಜಿಲ್ಲೆಯ 2022-23ನೇ ಸಾಲಿನಲ್ಲಿ ಕನಿಷ್ಟ ಬೆಂಬಲಬೆಲೆ ಯೋಜನೆಯಡಿ ಜಿಲ್ಲೆಯ ರೈತರಿಂದರಾಗಿ ಖರೀದಿಸಲು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ (ಕೆಎಫ್‌ಸಿಎಸ್‌ಸಿ ಬೆಂಗಳೂರು (ದಕ್ಷಿಣ)) ರವರನ್ನು ಖರೀದಿ ಏಜೆನ್ಸಿಯಾಗಿ ನೇಮಕ ಮಾಡಲಾಗಿದ್ದು, 2022ರ ಡಿಸೆಂಬರ್ 15 ರಿಂದ ರಾಗಿ ಖರೀದಿಗೆ ಸಂಬಂಧಿಸಿದಂತೆ ರೈತರ ನೋಂದಣಿ ಕಾರ್ಯವನ್ನು ಕೈಗೊಳ್ಳಲಾಗುವುದು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರೈತರ ನೋಂದಣೆಯ ಸಮಯದಲ್ಲಿ ಉಂಟಾಗುವ ಯಾವುದೇ ತೊಂದರೆ ಅಥವಾ ಗೊಂದಲವಿದ್ದಲ್ಲಿ ಕೆಎಫ್‌ಸಿಎಸ್‌ಸಿ ಮತ್ತು ಕೃಷಿ ಅಧಿಕಾರಿಗಳನ್ನು ಸಂಪರ್ಕಿಸುವುದು.
ದೇವನಹಳ್ಳಿ ತಾಲ್ಲೂಕಿನ ದೇವನಹಳ್ಳಿ ಖರೀದಿ ಕೇಂದ್ರದ ಹೆಚ್.ಎನ್.ನಾರಾಯಣ ಮೊ.ಸಂ.: 9886141435, ದೇವನಹಳ್ಳಿಯ ಚನ್ನರಾಯಪಟ್ಟಣದ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಸುನೀಲ್‌ಕುಮಾರ್ ಮೊ.ಸಂ.: 8277934022.
ದೊಡ್ಡಬಳ್ಳಾಪುರ ತಾಲ್ಲೂಕಿನ, ದೊಡ್ಡಬಳ್ಳಾಪುರ ಖರೀದಿ ಕೇಂದ್ರ 1, ವೈ.ಎಸ್.ನಾರಾಯಣಮೂರ್ತಿ ಮೊ.ಸಂ.: 9482991630, ಮಧುರೆ ರೈತ ಸಂಪರ್ಕ ಕೇಂದ್ರದ ಸಹಾಯಕ ಕೃಷಿ ಅಧಿಕಾರಿ ಶಶಿಧರ್ ಮೊ.ಸಂ.: 8277929974, ದೊಡ್ಡಬಳ್ಳಾಪುರ(ಸಾಸಲು) ದೊಡ್ಡಬಳ್ಳಾಪುರ ಖರೀದಿ ಕೇಂದ್ರ-2, ವೈ.ಎಸ್.ನಾರಾಯಣಮೂರ್ತಿ ಮೊ.ಸಂ.: 9482991630, ತೂಬುಗೆರೆ, ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ನವೀನ್, ಮೊ.ಸಂ.: 8277929969
ಹೊಸಕೋಟೆ ತಾಲ್ಲೂಕಿನ, ಹೊಸಕೋಟೆ ಖರೀದಿ ಕೇಂದ್ರ, ಕೆ.ಕೆ.ವರದರಾಜು ಮೊ.ಸಂ.: 9071487237, ಹೊಸಕೋಟೆಯ ಜಡಿಗೇನಹಳ್ಳಿ, ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಕೆ.ಬಿ.ನಾಗಭೂಷಣ್ ಮೊ.ಸಂ.: 8277934038,
ನೆಲಮಂಗಲ ತಾಲ್ಲೂಕಿನ, ನೆಲಮಂಗಲ ಖರೀದಿ ಕೇಂದ್ರದ, ವಿ.ಶಿವಕುಮಾರ್, ಮೊ.ಸಂ.: 9880361514, ನೆಲಮಂಗಲ, ಕಸಬಾ ರೈತ ಸಂಪರ್ಕ ಕೇಂದದ್ರ, ಸಹಾಯಕ ಕೃಷಿ ಅಧಿಕಾರಿ ಈ.ಯಲ್ಲಪ್ಪ ಮೊ.ಸಂ.: 8277934016 ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

