ದೊಡ್ಡಬಳ್ಳಾಪುರ, (ಡಿ.19): ಅಭಿಮಾನಿಗಳ ಬಹು ದಶಕಗಳ ಬೇಡಿಕೆಯಂತೆ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಪ್ರತಿಮೆಯನ್ನು ನಗರದ ಸಿದ್ದಲಿಂಗಯ್ಯ ವೃತ್ತದಲ್ಲಿರುವ ಬೆಸ್ಕಾಂ ಕಚೇರಿ ಮುಂಭಾಗ ಸ್ಥಾಪಿಸಲಾಗಿದೆ.
ನಗರದಲ್ಲಿ ಡಾ.ವಿಷ್ಣುವರ್ಧನ್ ಅವರ ಪ್ರತಿಮೆ ಸ್ಥಾಪಿಸಬೇಕೆಂಬುದು ಅಭಿಮಾನಿಗಳ ಬಹು ದಶಕಗಳ ಬೇಡಿಕೆಯಾಗಿದ್ದು, ಇದಕ್ಕೆ ಜೊತೆಯಾದ ಡಾ.ವಿಷ್ಣುಸೇನಾ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಅವರು ಜೊತೆಯಾಗಿದ್ದು, ಅವರು ನೀಡಿದ ಪ್ರತಿಮೆಯನ್ನು, ಭಾನುವಾರ ಸಂಜೆ ಅಭಿಮಾನಿಗಳು ಜೊತೆಯಾಗಿ ಸೇರಿ ಸ್ಥಾಪಿಸಲಾಯಿತು.
ಪುತ್ಥಳಿ ಅನಾವರಣೆ ಡಿಸೆಂಬರ್ 30ರಂದು ಅದ್ಧೂರಿಯಾಗಿ ನೆರವೇರಸಲು ಸಿದ್ಧತೆ ನಡೆಸಲಾಗಿದೆ.
ಈ ವೇಳೆ ನಗರಸಭೆ ಸದಸ್ಯರಾದ ಮಲ್ಲೇಶ್, ಆನಂದ್, ಡಾ.ವಿಷ್ಣುವರ್ಧನ್ ಅಭಿಮಾನಿಗಳಾದ ರೋಜಿಪುರ ವಿಜಯ್ ಕುಮಾರ್, ಭಾರ್ಗವ, ಕುಮಾರ್, ಪು.ಮಹೇಶ್, ನಾಗೇಶ್, ವಿಜಯ್ ಕುಮಾರ್, ಅಗ್ನಿ ವೆಂಕಟೇಶ್, ನಂಜಪ್ಪ, ಸೋಮಶೇಖರ್, ಪ್ರಕಾಶ್, ಆನಂದ್, ನಾಗೇಶ್, ರಾಮಾಂಜಿನಪ್ಪ, ಮತ್ತಿತರರಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

