ದೊಡ್ಡಬಳ್ಳಾಪುರ, (ಜುಲೈ.20); ಬೆಂಗಳೂರು ಗ್ರಾಮಾಂತರ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ.ಮುನೇಗೌಡ ಅವರಿಗೆ ಇಂದು ಜನ್ಮದಿನದ ಸಂಭ್ರಮ.
ಈ ಹಿನ್ನಲೆಯಲ್ಲಿ ಇಂದು ಗೃಹಕಚೇರಿಯಲ್ಲಿ, ಮುನೇಗೌಡರ ಜನ್ಮದಿನದ ಆಚರಣೆಯನ್ನು ಅಭಿಮಾನಿಗಳೇ ಸೇರಿ ಆಚರಿಸಿ, ಸಂಭ್ರಮಿಸಿದರು.
ಈ ವೇಳೆ ಜಿಲ್ಲಾಪಂಚಾಯಿತಿ ಮಾಜಿ ಸದಸ್ಯ ಅಪ್ಪಯ್ಯಣ್ಣ, ತಾಲೂಕು ಜೆಡಿಎಸ್ ಅಧ್ಯಕ್ಷ ಜಿ.ಲಕ್ಷ್ಮೀಪತಿ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ದೇವರಾಜಮ್ಮ, ನಗರಸಭೆ ಮಾಜಿ ಸದಸ್ಯ ಚಂದ್ರಶೇಖರ್, ನ್ಯಾಯವಾದಿ ಮುರುಳಿಧರ್, ಮಾಧ್ಯಮ ವಕ್ತಾರ ಕುಂಟನಹಳ್ಳಿ ಮಂಜುನಾಥ್, ಹೋಬಳಿ ಅಧ್ಯಕ್ಷರಾದ ಸಿದ್ದಪ್ಪ, ವಿಶ್ವನಾಥ್, ಸತೀಶ್ ಮತ್ತಿತರರು.
20 ವರ್ಷಗಳ ನಿರಂತರ ಸೇವೆ: ದೇವನಹಳ್ಳಿ ಮೂಲದವರಾದ ಬಿ.ಮುನೇಗೌಡ ಅವರು ದೊಡ್ಡದಾದ ತಾಲೂಕಿನಲ್ಲಿ ನಿರಂತರ ಸೇವೆಗಳ ಮೂಲಕ ಜನಸೇವಕರಾಗಿ ಗುರುತಿಸಿಕೊಂಡಿದ್ದಾರೆ.
ತೀವ್ರ ನೀರಿನ ಸಮಸ್ಯೆ ಎದುರಿಸುತ್ತಿದ್ದ ದೊಡ್ಡಬಳ್ಳಾಪುರ ನಗರವಾಸಿಗಳಿಗೆ ಉಚಿತವಾಗಿ ನೀರನ್ನು ಪೂರೈಸಿ ನೀರಿನ ಮುನೇಗೌಡರೆನಿಸಿದರು. ಅಲ್ಲದೆ ಸುಮಾರು 100 ಕ್ಕೂ ಹೆಚ್ಚು ದೇವಾಲಯಗಳಿಗೆ ನಿರ್ಮಾಣ, ಜೀರ್ಣೋದ್ಧಾರ, ಬಾಗಿನ ಕಾರ್ಯಕ್ರಮದ ಮೂಲದ ಸಾವಿರಾರು ಮಹಿಳೆಯರಿಗೆ ಬಾಗಿನ, ಸಾವಿರಾರು ಚಾಲಕರಿಗೆ ಉಚಿತವಾಗಿ ಡಿಎಲ್, ಬೀದಿ ವ್ಯಾಪಾರಿಗಳಿಗೆ ಉಚಿತ ತಳ್ಳುವ ಗಾಡಿ ವ್ಯವಸ್ಥೆ, ಕರೋನಾ ಸಂದರ್ಭದಲ್ಲಿ ವಾರ್ಡ್ ವಾರು ಊಟ ಪೂರೈಕೆ ಸೇರಿದಂತೆ ಬಡವರ ವಿಧ್ಯಾಭ್ಯಾಸ, ಮದುವೆಗಳಿಗೆ ಆರ್ಥಿಕ ನೆರವು ನೀಡಿದ್ದಾರೆ.
ಕಿಮ್ಸ್ ಆಸ್ಪತ್ರೆಗೆ ಅಧ್ಯಕ್ಷರಾದ ಸಂದರ್ಭದಲ್ಲಿ ದೊಡ್ಡಬಳ್ಳಾಪುರದ ಸಾವಿರಾರು ಮಂದಿ ಅನಾರೋಗ್ಯ ಪೀಡಿತರಿಗೆ ನೆರವು ನೀಡಿ ಜನ ಸೇವೆ ಸಲ್ಲಿಸಿದ್ದಾರೆ.
ಈ ಎಲ್ಲಾ ಸೇವೆಯ ನಡುವೆ ಜೆಡಿಎಸ್ ಪಕ್ಷದ ದಿಂದ ಸತತ ಮೂರು ಬಾರಿ, ಸ್ವತಂತ್ರವಾಗಿ ಒಂದು ಬಾರಿ ತಾಲೂಕಿನ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಪರಾಜಿತರಾದರೂ ಕೂಡ ಇಂದಿಗೂ ತಾಲೂಕಿನ ನಿಕಟ ಸಂಪರ್ಕವನ್ನು ಹೊಂದಿರುವ ಅವರು, ನಿರಂತರವಾಗಿ ಸೇವಾ ಕಾರ್ಯವನ್ನು ಮುಂದುವರಿಸುತ್ತಲೇ ಇದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….