ಬೆಂಗಳೂರು: ನೈರುತ್ಯ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಬೆಂಗಳೂರು ನಗರ ಸೇರಿದಂತೆ ಹಲವೆಡೆ ಮಳೆಯಾಗುತ್ತಿದೆ.
ಬೆಂಗಳೂರು ನಗರ, ಗ್ರಾಮಾಂತರ ಪ್ರದೇಶಗಳಲ್ಲಿ ಇಂದು ಕೂಡ ಮೋಡ ಕವಿದ ವಾತಾವರಣ ಇರಲಿದ್ದು, ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.
ಬಿಟ್ಟೂ ಬಿಡದೆ ಸುರಿಯುತ್ತಿರುವ ಮಳೆಯ ಹಿನ್ನೆಲೆ ಹೊಸ ಟೆನ್ಷನ್ ರೈತರಲ್ಲಿ ನಿರ್ಮಾಣ ಆಗಿದೆ. ಈ ಬಾರಿ ಮುಂಗಾರು ಮಳೆ ಅದ್ಭುತವಾಗಿ ಬಂದಿತ್ತು, ಹೀಗಾಗಿ ರಾಜ್ಯದ ರೈತರು ಫುಲ್ ಖುಷಿಯಾಗಿದ್ದರು. ಆದರೆ ಉತ್ತಮ ಬೆಳೆಯನ್ನು ಕಟಾವು ಮಾಡುವ ರೈತರ ನಿರೀಕ್ಷೆಗೆ ಇದೀಗ ಹಿಂಗಾರು ಮಳೆ ಆತಂಕವನ್ನು ಉಂಟುಮಾಡಿದೆ.
ಮಳೆ ಆರ್ಭಟ ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಿದ್ದು, ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಮಳೆ ಆರ್ಭಟಿಸುತ್ತಿದೆ. ಚಳಿಗಾಲ ಇನ್ನೇನು ಆರಂಭ ಆಗುತ್ತಿದೆ. ಹೀಗೆ ಚಳಿಗಾಲದ ಆರಂಭದಲ್ಲೂ ಮಳೆ ಬರುತ್ತಿದೆ ಅಂದ್ರೆ ಜನರಿಗೆ ಕೂಡ ನಂಬಲು ಆಗುತ್ತಿಲ್ಲ.
ಈ ರೀತಿ ಜನರನ್ನು ಕೂಡ ಭಾರಿ ಮಳೆ ಗೊಂದಲಕ್ಕೆ ದೂಡಿರುವ ಸಮಯದಲ್ಲೇ ಮತ್ತಷ್ಟು ಜಿಲ್ಲೆ & ತಾಲೂಕುಗಳಿಗೆ ಇದೀಗ ಭಾರಿ ಮಳೆ ಎಂಟ್ರಿ ಆಗಲಿದೆ ಎಂದು ವಾರ್ನಿಂಗ್ ಕೊಡಲಾಗಿದೆ.
ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಮಳೆ ನಿರೀಕ್ಷೆ ಇದೆ. ಉತ್ತರ ಒಳನಾಡಿನಲ್ಲಿ ಮಳೆ ಮುನ್ಸೂಚನೆ ಇದೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.