ದೊಡ್ಡಬಳ್ಳಾಪುರ : ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಹಾಗು ನಾಟಕಕಾರ ಡಾ.ಗಿರೀಶ್ ಕಾರ್ನಾಡ್ ಜನ್ಮದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ವೇಳೆ ಉಪನ್ಯಾಸ ನೀಡಿ ಮಾತನಾಡಿದ ಸಾಮಾಜಿಕ ಚಿಂತಕ ರಮೇಶ್ ಸಂಕ್ರಾಂತಿ, ಗಿರೀಶ್ ಕಾರ್ನಾಡ್ ರವರು ನಾಟಕಕಾರ, ನಿರ್ದೇಶಕ, ಕಲಾವಿದ, ಸಾಹಿತ್ಯ-ಸಂಸ್ಕೃತಿ- ಸಾಮಾಜಿಕ ಚಿಂತಕರಾಗಿದ್ದು,ಬಹುಮುಖ ಪ್ರತಿಭೆಯುಳ್ಳವರಾಗಿದ್ದರು.ತಮ್ಮ ಕೃತಿಗಳಲ್ಲಿ ಐತಿಹಾಸಿಕ ರಾಜಕೀಯ ಪಾತ್ರಗಳನ್ನು ವರ್ತಮಾನದ ಆಧುನಿಕ ಪ್ರಜಾಪ್ರಭುತ್ವ ದ ಪಾತ್ರಗಳೊಂದಿಗೆ ಸಮೀಕರಿಸಿ ವ್ಯವಸ್ಥೆ ಯನ್ನು ವಿಡಂಬನೆಗೆ ಒಳಪಡಿಸುವ ತೀಕ್ಷತೆ ಅವರಿಲ್ಲಿತ್ತು ಎಂದರು.
ತಾಲೂಕು ಕಸಾಪ ಅಧ್ಯಕ್ಷೆ ಪ್ರಮೀಳ ಮಹಾದೇವ್ ಮಾತನಾಡಿ,ಕನ್ನಡದ ಜ್ಞಾನ ಪೀಠ ಪುರಸ್ಕೃತ ಸಾಹಿತಿಗಳ ಬದುಕು-ಬರಹ ಕುರಿತು ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಸಲುವಾಗಿ ಈ ರೀತಿಯ ಕಾರ್ಯಕ್ರಮ ಗಳನ್ನು ಆಯೋಜಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಾಹಿತ್ಯ ಪರಿಷತ್ತಿನ ಕಾರ್ಯಧ್ಯಕ್ಷ ತರಿದಾಳ್ ಶ್ರೀನಿವಾಸ್, ಸಹಕಾರ್ಯದರ್ಶಿ ಗಂಗರಾಜ ಶಿರವಾರ,ಕೋಶಾಧ್ಯಕ್ಷೆ ನಿರ್ಮಲ,ವೆಂಕಟೇಶ್,ನಗರಧ್ಯಕ್ಷ ಬಿ.ಪಿ.ಹರಿಕುಮಾರ್, ಕನ್ನಡಪರ ಹೋರಾಟಗಾರರಾದ ಚೌಡರಾಜ್,ನೆಲಗುದಿಗೆ ಚಂದ್ರು ಮತ್ತಿತರರಿದ್ದರು.