ದೊಡ್ಡಬಳ್ಳಾಪುರ : ಬುಧವಾರ ಸಂಜೆ ಬೀಸಿದ ಭಾರಿ ಗಾಳಿಗೆ,ತಾಲೂಕಿನ ಗರುಡಗಲ್ಲು ಗ್ರಾಮದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಛಾವಣಿಗೆ ಹೊದಿಸಲಾಗಿದ್ದ ಸಿಮೆಂಟ್ ಶೀಟುಗಳು ಹಾರಿಹೋಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬುಧವಾರ ಸಂಜೆ 5ಗಂಟೆ ಸುಮಾರಿನಲ್ಲಿ ಬೀಸಿದ ಭಾರಿ ಗಾಳಿಗೆ ಸೀಟುಗಳು ಹಾರಿ ಹೋಗಿದ್ದು,ನೀರಿನ ವ್ಯವಸ್ಥೆಗಾಗಿ ಅಳವಡಿಸಿದ್ದ ಪ್ಲಾಸ್ಟಿಕ್ ನೀರಿನ ತೊಟ್ಟಿ ನೆಲಕ್ಕುರುಳಿ ಹಾಳಾಗಿದೆ.
ಅದೃಷ್ಟವಶಾತ್ ಶಾಲೆಯ ಆವರಣದಲ್ಲಿ ಯಾರು ಇರದ ಕಾರಣ ಯಾವುದೇ ಜೀವ ಹಾನಿ ಹಾಗಿಲ್ಲವೆಂದು ಶಾಲೆಯ ಮುಖ್ಯಶಿಕ್ಷಕ ಮುತ್ತುರಾಜ್ ಹರಿತಲೇಖನಿಗೆ ತಿಳಿಸಿದ್ದಾರೆ.
ಘಟನೆಯಿಂದಾಗಿ ಸುಮಾರು 50 ಸಾವಿರದಷ್ಟು ನಷ್ಟ ಉಂಟಾಗಿದ್ದು,ಶಿಕ್ಷಣ ಇಲಾಖೆಗೆ ಮಾಹಿತಿ ಸಲ್ಲಿಸಲಾಗುವುದೆಂದಿದ್ದಾರೆ.