ದೊಡ್ಡಬಳ್ಳಾಪುರ : ಕರೊನಾ ಸೋಂಕು ತಡೆಗಟ್ಟಲು ಘೋಷಿಸಲಾದ ಲಾಕ್ ಡೌನ್ ಹಿನ್ನೆಲೆ ತೊಂದರೆಗೊಳಗಾದ ಸಾಸಲು ಹೋಬಳಿಯ ಬಡ ಜನತೆ ಬಿಜೆಪಿ ಮುಖಂಡ ಲಗ್ಗೆರೆ ನಾರಾಯಣಸ್ವಾಮಿ ದಿನಸಿಕಿಟ್ ವಿತರಿಸಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಅವರು,ಜನರ ಸಂಕಷ್ಟದ ಸಮಯದಲ್ಲಿ ಉಳ್ಳವರು ನೆರವಾಗುವುದು ಮಾನವೀಯ ಕರ್ತವ್ಯ, ಈ ನಿಟ್ಟಿನಲ್ಲಿ ತಾಲೂಕಿನಲ್ಲಿ ಸುಮಾರು 40 ಸಾವಿರ ದಿನಸಿ ಕಿಟ್ ವಿತರಣೆ ಮಾಡಲಾಗುತ್ತಿದೆ ಎಂದರು.
ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಹೆಚ್.ಎಸ್.ಅಶ್ವಥ್ ನಾರಾಯಣಕುಮಾರ್ ಮಾತನಾಡಿ,ದಿನಸಿ ಕಿಟ್ ವಿತರಣೆ ಜೀವನ ಪರ್ಯಂತಕ್ಕಲ್ಲ ಎಂಬ ಅರಿವು ನಮಗಿದೆ,ಆದರೆ ಸಂಕಷ್ಟದಲ್ಲಿ ಜನರಿಗೆ ಸ್ವಲ್ಪವಾದರೂ ನೆರವಾಗುವುದು ಮುಖ್ಯ.ಮುಖಂಡರಾದ ಲಗ್ಗೆರೆ ನಾರಾಯಣಸ್ವಾಮಿ ಅವರು ಜನರಪರ ಕಾಳಜಿ ಇದೇ ರೀತಿ ತಾಲೂಕಿನಲ್ಲಿ ಮುಂದುವರೆಯಲಿ ಎಂದರು.
ಈ ವೇಳೆ ಮಾಜಿ ಶಾಸಕ ಜೆ.ನರಸಿಂಹಸ್ವಾಮಿ,ಬಿಜೆಪಿ ತಾಲೂಕು ಅಧ್ಯಕ್ಷ ನಾಗರಾಜ್,ಪಿಎಲ್ ಡಿ ಬ್ಯಾಂಕ್ ನಿರ್ದೇಶಕರಾದ ಲಕ್ಷ್ಮೀಪತಯ್ಯ,ನರಸಿಂಹಮೂರ್ತಿ,ಮುಖಂಡರಾದ ಬಿ.ಸಿ.ನಾರಾಯಣಸ್ವಾಮಿ,ಜಿಲ್ಲಾ ಖಜಾಂಚಿ ಶಿವಾನಂದರೆಡ್ಡಿ ಮತ್ತಿತರಿದ್ದರು.