ದೊಡ್ಡಬಳ್ಳಾಪುರ : ಮಗುವಿನ ಮೂತ್ರ ವಿಸರ್ಜನೆ ಸಲುವಾಗಿ ರಸ್ತೆ ಬದಿಯಲ್ಲಿ ನಿಂತಿದ್ದ ಮಹಿಳೆಗೆ ಟ್ರಾಕ್ಟರ್ ಗುದ್ದಿದ ಪರಿಣಾಮ.ತೀವ್ರ ಗಾಯಗೊಂಡಿದ್ದ ಗೃಹಣಿ ಸಾವನಪ್ಪಿರುವ ಘಟನೆ ನಗರದ ಹೊರವಲಯದ ಅರಳು ಮಲ್ಲಿಗೆ ಬಳಿ ನಡೆದಿದೆ.
ಶನಿವಾರ ಸಂಜೆ ನಾಗಸಂದ್ರ ನಿವಾಸಿ ಎನ್ನಲಾಗುತ್ತಿರುವ ಸತ್ಯ.ಪಿ (34) ಎನ್ನುವವರು,ಪತಿ ನಾಗೇಶ್ ಹಾಗೂ ಮಗುವಿನೊಂದಿಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ.ಮಗುವಿನ ಮೂತ್ರ ವಿಸರ್ಜನೆಯ ಸಲುವಾಗಿ ಅರಳು ಮಲ್ಲಿಗೆ ಬಳಿ ರಸ್ತೆ ಬದಿಯಲ್ಲಿ ನಿಂತಿದ್ದು,ಈ ವೇಳೆ ಏಕಾಏಕಿ ನುಗ್ಗಿ ಬಂದ ಟ್ರಾಕ್ಟರ್ ಆಕೆಯ ಮೇಲೆರಗಿ ಅಪಘಾತ ಸಂಭವಿಸಿದೆ ಎಂದು ಸ್ಥಳೀಯರು ಹರಿತಲೇಖನಿಗೆ ತಿಳಿಸಿದ್ದಾರೆ.
ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಉಮಾ ಅವರನ್ನು, ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾರೆ.
ಅದೃಷ್ಟವಶಾತ್ ಮಗುವಿಗೆ ಯಾವುದೇ ತೊಂದರೆ ಉಂಟಾಗಿಲ್ಲ ಎನ್ನಲಾಗಿದೆ.ಇದೇ ವೇಳೆ ವಾಹನದ ಬಳಿ ನಿಂತಿದ್ದ ನಾಗೇಶ್ಗೆ ಗಾಯಗಳಾಗಿವೆ.
ಟ್ರಾಕ್ಟರ್ ಚಾಲಕನ ನಿರ್ಲಕ್ಷ್ಯದಿಂದಲೇ ಘಟನೆ ಸಂಭವಿಸಿದೆ ಎಂದು ಸ್ಥಳೀಯರು ದೂರಿದ್ದು,ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
*******