ದೊಡ್ಡಬಳ್ಳಾಪುರ: ಜೂನ್ 25ರಿಂದ ಆರಂಭವಾಗಲಿರುವ ಎಸ್ಎಸ್ಎಲ್ಸಿ ಪರೀಕ್ಷೆಯ ಬಗ್ಗೆ ಸಂದೇಹ ನಿವಾರಣೆ/ವಿಚಾರಣೆಗಾಗಿ ಸಹಾಯವಾಣಿ ತೆರೆಯಲಾಗಿದೆ ಎಂದು ದೊಡ್ಡಬಳ್ಳಾಪುರ ಕ್ಷೇತ್ರಶಿಕ್ಷಣಾಧಿಕಾರಿ ಬೈಯಪ್ಪರೆಡ್ಡಿ ಹರಿತಲೇಖನಿಗೆ ತಿಳಿಸಿದ್ದಾರೆ.
ಪರೀಕ್ಷೆ ನಡೆಯಲಿರುವ ಪರೀಕ್ಷಾ ಕೇಂದ್ರಗಳಿಗೆ ನೋಡಲ್ ಅಧಿಕಾರಿ ಮಾರುತಿ ಅವರೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು,ಕರೊನಾ ಸೋಂಕಿನ ಕಾರಣ ಮುಂದೂಡಲಾಗಿದ್ದ ಎಸ್ಎಸ್ಎಲ್ಸಿ ಪರೀಕ್ಷೆ ಜೂನ್ 25ರಿಂದ ಜುಲೈ 3ರವರೆಗೆ ನಡೆಯಲಿದ್ದು ತಾಲೂಕು ಶಿಕ್ಷಣ ಇಲಾಖೆ ಸರ್ಕಾರ ನೀಡಿರುವ ಆದೇಶದ ಅನ್ವಯ ಸಿದ್ದತೆ ಕೈಗೊಳ್ಳಲಾಗುತ್ತಿದೆ ಎಂದರು.
ಈ ನಿಟ್ಟಿನಲ್ಲಿ ತಾಲೂಕಿನ ವಿದ್ಯಾರ್ಥಿಗಳಿಗೆ ಗೊಂದಲ / ಸಂದೇಹ ನಿವಾರಣೆಗೆ ಸಹಾಯವಾಣಿ ರಚಿಸಲಾಗಿದ್ದು,ಮುನೇಗೌಡ – 9845386488, ರಮೇಶ್- 9481806074,ಸತೀಶ್ – 9845697523, ಕಚೇರಿ ಸಂಖ್ಯೆ 08027622208.ಇವರುಗಳಿಗೆ ಕರೆ ಮಾಡಿ ವಿಚಾರಣೆ ನಡೆಸಬಹುದಾಗಿದೆ.
ತಾಲೂಕಿನಲ್ಲಿ 3355 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.ಲಾಕ್ ಡೌನ್ ಕಾರಣ ಇತರೆ ಜಿಲ್ಲೆಗಳಿಗೆ 30ವಿದ್ಯಾರ್ಥಿಗಳು ವಲಸೆ ಹೋಗಿದ್ದು,ಅಲ್ಲಿಯೇ ಪರೀಕ್ಷೆ ಬರೆಯುತ್ತಿದ್ದಾರೆ.ಇದೇ ರೀತಿ ಇತರೆ ಜಿಲ್ಲೆ,ತಾಲೂಕಿನಿಧ 11ಮಂದಿ ವಿದ್ಯಾರ್ಥಿಗಳು ದೊಡ್ಡಬಳ್ಳಾಪುರ ತಾಲ್ಲೂಕಿನ ಪರೀಕ್ಷಾ ಕೇಂದ್ರಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ.
14 ಪರೀಕ್ಷಾ ಕೇಂದ್ರಗಳು
ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಒಟ್ಟು 14 ಪರೀಕ್ಷಾ ಕೇಂದ್ರಗಳನ್ನು ರಚಿಸಲಾಗಿದೆ.ಕರೊನಾ ವೈರಾಣು ಕಾರಣ ಪರೀಕ್ಷಾ ಕೇಂದ್ರವಿರುವ ಸ್ಥಳವನ್ನು ಕಂಟೋನ್ಮೆಂಟ್ ಜೋನ್ ಎಂದು ಘೋಷಣೆಯಾದಲ್ಲಿ ಮುಂಜಾಗ್ರತೆಯ ಕ್ರಮವಾಗಿ ಅರಳುಮಲ್ಲಿಗೆಯ ನಳಂದ ಪ್ರೌಢಶಾಲೆ ಹಾಗೂ ಸಂಜಯನಗರದ ಶ್ರೀ ಅರವಿಂದ ಅನುದಾನಿತ ಪ್ರೌಢಶಾಲೆಯನ್ನು ಹೆಚ್ಚುವರಿಯಾಗಿ ಗುರುತಿಸಲಾಗಿದೆ.
ಪರೀಕ್ಷಾ ಸಿಬ್ಬಂದಿಗಳ ನೇಮಕ
ಸುಗಮ ಪರೀಕ್ಷೆ ನಡೆಸಲು 14 ಮುಖ್ಯ ಅಧೀಕ್ಷಕರು,3ಉಪಮುಖ್ಯ ಅಧೀಕ್ಷಕರು,14 ಪ್ರಶ್ನೆ ಪತ್ರಿಕೆ ಅಭಿರಕ್ಷಕರು,196 ಕೊಠಡಿ ಮೇಲ್ವಿಚಾರಕರು,70 ಮೀಸಲು ಕೊಠಡಿ ಮೇಲ್ವಿಚಾರಕರು,ಕರೊನಾ ಸೋಂಕು ಹರಡುವಿಕೆ ಹಿನ್ನೆಲೆ ಸಾಮಾಜಿಕ ಅಂತರ ಕಾಪಾಡಲು ಮತ್ತು ಸ್ಯಾನಿಟೈಸೇಷನ್ ಪ್ರಕ್ರಿಯೆಗಾಗಿ ಪ್ರತಿ ಕೇಂದ್ರಕ್ಕೆ 2 ದೈಹಿಕ ಶಿಕ್ಷಕರು,ಮತ್ತು ಸ್ಕೌಟ್ ಮತ್ತು ಗೈಡ್ಸ್ ಶಿಕ್ಷಕರು,ಆಶಾ ಕಾರ್ಯಕರ್ತೆಯರು,4 ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
ಮುಂಜಾಗ್ರತಾ ಕ್ರಮಗಳು
ಪ್ರತಿ ಪರೀಕ್ಷಾ ಕೇಂದ್ರವನ್ನು ಪರೀಕ್ಷೆ ಆರಂಭಕ್ಕು ಎರಡು ದಿನ ಮುಂಚಿತವಾಗಿ ಸಂಪೂರ್ಣ ಸ್ಯಾನಿಟೈಸ್ ಮಾಡಲಾಗಿದ್ದು,ಪ್ರತಿ ವಿದ್ಯಾರ್ಥಿಗೆ ಎರಡು ಜೊತೆ ಮಾಸ್ಕ್ ವಿತರಿಸಲಾಗುತ್ತಿದೆ,ಪರೀಕ್ಷಾ ಕೇಂದ್ರಗಳಿಗೆ ಅಗತ್ಯ ಸ್ಯಾನಿಟೈಸರ್ ಪೂರೈಕೆ,ಪರೀಕ್ಷಾ ಕೇಂದ್ರದ ಬಾಗಿಲಲ್ಲಿ ವಿದ್ಯಾರ್ಥಿಗಳಿಗೆ ಆರೋಗ್ಯ ತಪಾಸಣೆಗೆ ಒಳಪಡಿಸಲು ಹೆಲ್ತ್ ಡೆಸ್ಕ್ ರಚನೆ,ಸಾಮಾಜಿಕ ಅಂತರ ಕಾಯ್ದುಕೊಳ್ಳಲು ತಲಾ ಮೂರು ಅಡಿಯಷ್ಟು ಚೌಕಗಳ ರಚನೆ,ಡೆಸ್ಕ್ಗೆ ಇಬ್ಬರು ವಿದ್ಯಾರ್ಥಿಗಳಂತೆ ಪ್ರತಿ ಡೆಸ್ಕ್ ಗೆ 3ಅಡಿ ಅಂತರ,ಒಂದು ಕೊಟ್ಟಡಿಯಲ್ಲಿ 18ರಿಂ20 ಮಂದಿ ವಿದ್ಯಾರ್ಥಿಗಳಿಗೆ ಆಸನದ ವ್ಯವಸ್ಥೆ, ರೋಗದ ಲಕ್ಷಣಗಳಿರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿ ಮೀಸಲು ಹಾಗೂ N95ಮಾಸ್ಕ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ.
ವಿದ್ಯಾರ್ಥಿಗಳಿಗೆ ವಾಹನದ ವ್ಯವಸ್ಥೆ
ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳನ್ನು ಕರೆತರಲು ಕೆಸ್ಎಸ್ಆರ್ಟಿಸಿ ಇಲಖೆಯ ಸಹಕಾರದೊಂದಿಗೆ 15 ಮಾರ್ಗಗಳನ್ನು ರಚಿಸಿ,17ಬಸ್ಗಳನ್ನು ವ್ಯವಸ್ಥೆ ಮಾಡಲಾಗಿದೆ,ಈ ಮಾರ್ಗ ಗಳಿಂದ ಒಟ್ಟು 410 ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ತಲುಪಲಿದ್ದಾರೆ.
ಸಿಸಿಟಿವಿ ಕ್ಯಾಮೆರಾ ಕಣ್ಗಾವಲು
ಕರೊನಾ ಸೋಂಕು ಹರಡುವಿಕೆ ಹಿನ್ನೆಲೆ ಪರೀಕ್ಷೆ ನಡೆಸುವುದು ಸವಾಲಿನ ವಿಷಯವಾಗಿದ್ದರು ಪರೀಕ್ಷೆ ಪಾವಿತ್ರ್ಯತೆ ಕಾಪಾಡಲು ಕ್ರಮಕೈಗೊಳ್ಳಾಲಾಗುತ್ತಿದೆ.ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದ್ದು,ಗ್ರೂಪ್ ಎ ಮತ್ತು ಬಿ ವೃಂದದ ಅಧಿಕಾರಿಗಳನ್ನೊಳಗೊಂಡ ವಿಚಕ್ಷಣಾ ದಳವನ್ನು ರಚಿಲಾಗಿದೆ.ಅಲ್ಲದೆ ಮೊಬೈಲ್ ಗಳನ್ನು ಪರೀಕ್ಷಾ ಕೇಂದ್ರಗಳಿಗೆ ತೆಗೆದುಕೊಂಡು ಹೋಗುವುದ ತಪ್ಪಿಸಲು ಮೋಬೈಲ್ ಸ್ವಾಧೀನ ಅಧಿಕಾರಿ ನೇಮಕ ಹಾಗೂ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷ ಬೇಸಿಕ್ ಮೊಬೈಲ್ ಬಳಕೆ ಅನುಮತಿ ಹೊರತು ಪಡಿಸಿ ಯಾವ ಅಧಿಕಾರಿ,ಸಿಬ್ಬಂದಿ ಮೊಬೈಲ್ ಬಳಕೆ ಮಾಡದಂತೆ ನಿಷೇಧ ಹೇರಲಾಗಿದೆ.
ಇದೆಲ್ಲದರ ನಡುವೆ ಹೊರ ರಾಜ್ಯದಲ್ಲಿ ನೆಲೆಸಿರುವ/ ಕಂಟೋನ್ಮೆಂಟ್ ಜೋನ್ ನಲ್ಲಿರುವ/ ಕೋವಿಡ್ 19ಪಾಸಿಟೀವ್ ಇರುವ ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆಯಲು ಸಾಧ್ಯವಾಗದಿದ್ದಲ್ಲಿ,ಮುಂದಿನ ತಿಂಗಳು ನಡೆಸುವ ಪೂರಕ ಪರೀಕ್ಷೆಯಲ್ಲಿ ಅವಕಾಶ ಕಲ್ಪಿಸಿ ಆ ಪ್ರಯತ್ನವನ್ನು ಪ್ರಥಮ ಪ್ರಯತ್ನೆವೆಂದೇ ಪರಿಗಣಿಸಲಾಗುವುದೆಂದು ತಿಳಿಸಿದ್ದಾರೆ.
ಹರಿತಲೇಖನಿ ನ್ಯೂಸ್ ದೊಡ್ಡಬಳ್ಳಾಪುರ