ಬೆಂಗಳೂರು: ಮೊದಲ ದಿನದ ಎಸ್.ಎಸ್.ಎಲ್.ಸಿ ಪರೀಕ್ಷೆ ನಾಡಿನ ಜನತೆಯ ಹಾರೈಕೆಯಿಂದ ಇಂದು ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.
ಮೊದಲ ದಿನದ ಪರೀಕ್ಷಾ ಹಾಜರಾತಿ 98.3% ಇತ್ತು.ಪ್ರತಿ ಪರೀಕ್ಷಾ ಕೇಂದ್ರವನ್ನು ಸುರಕ್ಷಾ ಕೇಂದ್ರವನ್ನಾಗಿ ಮಾಡುವಲ್ಲಿ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದೆ.
ಎಲ್ಲಾ ಪೋಷಕರಲ್ಲಿ ಒಂದು ಮನವಿ.
ಇಂದಿನ ಪರೀಕ್ಷಾ ಕೇಂದ್ರದಲ್ಲಿನ ವಾತಾವರಣ ಹೇಗಿತ್ತು ಎನ್ನುವ ಕುರಿತು ತಮ್ಮ ಮಗ/ಮಗಳು ಅಥವಾ ತಮ್ಮ ಹತ್ತಿರದ ಮಗುವಿನ ಹತ್ತಿರ ವಿಚಾರಿಸಿ.
ಇನ್ನೂ ಹೆಚ್ಚು ಸುಧಾರಣೆ ಮಾಡುವಲ್ಲಿ ಇನ್ನೇನಾದರೂ ಸಲಹೆ ಇದ್ದರೆ ತಿಳಿಸಿ.ಶಿಕ್ಷಣ ಇಲಾಖೆ ತಮ್ಮ ಸಲಹೆಗಳಲ್ಲಿ ಸೂಕ್ತವಾದ ಸಲಹೆಯನ್ನು ಅನುಷ್ಟಾನಗೊಳಿಸಲು ಸಹಾಯವಾಗುವುದು.
ಇನ್ನಷ್ಟು ಉತ್ತಮ ವಾತಾವರಣ ನಿರ್ಮಿಸಲು ಇದು ಸಹಕಾರಿಯಾಗುತ್ತದೆ ಎಂದು ಪೋಷಕರಿಗೆ ಮನವಿ ಮಾಡಿದ್ದಾರೆ.