ದೊಡ್ಡಬಳ್ಳಾಪುರ: ನಗರದ ರಾಮಣ್ಣ ಬಾವಿ ಸಮೀಪದಲ್ಲಿನ ಆಂಜನೇಯಸ್ವಾಮಿ ದೇವಾಲಯದ ಆವರಣವನ್ನು ಭಜರಂಗದಳ ವಿಶ್ವ ಹಿಂದು ಪರಿಷತ್ ಕಾರ್ಯಕರ್ತರು ಸ್ವಚ್ಚತೆ ಕಾರ್ಯ ನಡೆಸಿ,ಸುಮಾರು ಹತ್ತಕ್ಕು ಹೆಚ್ಚು ಸಸಿಗಳನ್ನು ನೆಟ್ಟು ಪೋಷಣೆಯ ಜವಬ್ದಾರಿ ಹೊತ್ತರು.
ಈ ಸಂಧರ್ಭದಲ್ಲಿ ಮಾತನಾಡಿದ ಭಜರಂಗದಳದ ಜಿಲ್ಲಾ ಸಂಯೋಜಕ ಮಧು ಬೇಗಲಿ,ಪರಿಸರ ಜವಬ್ದಾರಿ ಕೇವಲ ವಿಶ್ವ ಪರಿಸರ ದಿನಾಚರಣೆಗೆ ಸೀಮಿತವಾಗಬಾರದು,ಪರಿಸರದ ಉಳಿವು ಎಲ್ಲರ ಉಳಿವು ಎಂಬುದನ್ನು ಪ್ರತಿಯೊಬ್ಬರೂ ಅರ್ಥೈಸಿಕೊಳ್ಳಬೇಕೆಂದರು.
ತಾಲೂಕು ಸಂಚಾಲಕ ಬಾಸ್ಕರ್ ಭಗತ್ ಮಾತನಾಡಿ,ಸಸಿಗಳನ್ನು ನೆಟ್ಟು ಸೆಲ್ಫಿ ಪಡೆದವರ ಆ ಗಿಡ ಇಂದು ಯಾವ ಸ್ಥಿತಿಯಲ್ಲಿದೆ ಒಮ್ಮೆ ಪರೀಕ್ಷಿಸಬೇಕಿದೆ.ಪರಿಸರದ ನಿಜವಾದ ಕಾಳಜಿ ಪ್ರತಿ ದಿನ ಇರಬೇಕಿದ್ದು,ನೆಟ್ಟ ಸಸಿಗಳ ಪೋಷಣೆಯ ಜವಬ್ದಾರಿಯನ್ನು ಹೊತ್ತಾಗ ಮಾತ್ರ ಪರಿಸರ ಉಳಿವಿಗೆ ಸಹಕಾರಿ ಎಂದರು.
ಈ ವೇಳೆ ದೇವಾಲಯದ ಅರ್ಚಕರಾದ ವಾಸುದೇವ್,ನಗರ ಸಂಚಾಲಕ ಗಿರೀಶ್,ನಗರ ಸಹ ಸಂಚಾಲಕ ವೀರರಾಜು,ಕಾರ್ಯಕರ್ತರಾದ ಕುಶಾಲ್,ನವೀನ್,ತೇಜಸ್,ಶ್ರೀಕಾಂತ್,ಮನು,ಭವಿಷ್ಯ ಎಜುಕೇಷನ್ ಟ್ರಸ್ಟ್ ನಾಗರಾಜ್ ಮತ್ತಿತರಿದ್ದರು.