ಬೆಂಗಳೂರು: ಜುಲೈ 5 ಭಾನುವಾರದಿಂದ ಮುಂದಿನ ಆಗಸ್ಟ್ 2 ರವರೆಗೆ ಎಲ್ಲ ಭಾನುವಾರಗಳಂದು ಸಂಪೂರ್ಣ ಲಾಕ್ ಡೌನ್ ಮಾಡಲು ಸರ್ಕಾರ ತೀರ್ಮಾನಿಸಿದ್ದು,ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಆದೇಶ ಹೊರಡಿಸಿದ್ದಾರೆ.
ಕರೊನಾ ಸೋಂಕು ನಿಯಂತ್ರಣಕ್ಕೆ ಕಠಿಣ ಕ್ರಮ ಜಾರಿಗೆ ಮುಂದಾಗಿರುವ ಸರ್ಕಾರ ಈ ಆದೇಶ ಹೊರಡಿಸಿದ್ದು,ಈ ಲಾಕ್ ಡೌನ್ ಅಗತ್ಯ ಸರಕು ಸಾಗಾಣಿಕೆಗೆ ಯಾವುದೇ ನಿರ್ಬಂಧ ಇರುವುದಿಲ್ಲ.
ಜುಲೈ.5 ರಿಂದ ಆಗಸ್ಟ್ 2 ರವರೆಗಿನ ಎಲ್ಲಾ ಭಾನುವಾರಗಳಂದು ಪೂರ್ಣ ಲಾಕ್ ಡೌನ್ ಜಾರಿಯಲ್ಲಿರುತ್ತದೆ. ಅಗತ್ಯ ಸರಕು-ಸೇವೆಗಳಿಗೆ ಅನುಮತಿ ನೀಡಲಾಗಿದ್ದು.ಎಲ್ಲಾ ಸರ್ಕಾರಿ ಇಲಾಖೆ ಕಚೇರಿ ನಿಗಮ ಮಂಡಳಿ ತುರ್ತು ಮತ್ತು ಅಗತ್ಯ ಸೇವೆ ಹೊರತುಪಡಿಸಿದ ಇಲಾಖೆಗಳನ್ನ
ಎರಡನೇ ಶನಿವಾರ ಮತ್ತು 4ನೇ ಶನಿವಾರ ಸೇರಿ ಜುಲೈ 10 ರಿಂದ ಎಲ್ಲಾ ಶನಿವಾರ ಆಗಸ್ಟ್ 8 ರವರೆಗೆ ಮುಚ್ಚಲಾಗುತ್ತೆ.
ರಾಜ್ಯಾದ್ಯಂತ ರಾತ್ರಿ 8 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿರಲಿದ್ದು,ಅಗತ್ಯ ವಸ್ತು ಸೇವೆ ಬಿಟ್ಟು ಉಳಿದ ಎಲ್ಲಾ ಸಂಚಾರವನ್ನು ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.