ದೊಡ್ಡಬಳ್ಳಾಪುರ: ನಗರ ಮತ್ತು ಗ್ರಾಮಾಂತರ ಪ್ರದೇಶ ಸೇರಿ ಒಂದೇ ದಿನ 18 ಜನರಲ್ಲಿ ಕೋವಿಡ್-19 ಸೋಂಕು ದೃಢ ಪಟ್ಟಿದ್ದು ಜನರನ್ನು ಆತಂಕಕ್ಕೆ ಒಳಗಾಗುವಂತೆ ಮಾಡಿದೆ.
ಲಾಕ್ ಡೌನ್ ತೆರೆವಾದ ನಂತರ ಜೂನ್ 27 ರಂದು ಪ್ರಥಮ ಬಾರಿಗೆ ದೊಡ್ಡಬಳ್ಲಾಪುರದ ಚೈತನ್ಯನಗರದಲ್ಲಿ ವ್ಯಕ್ತಿಯೊಬ್ಬರಲ್ಲಿ ಕೋವಿಡ್-19 ದೃಢ ಪಟ್ಟ ನಂತರ ಇಲ್ಲಿಯವರೆಗೆ ಸಕ್ರಿಯ ಸೋಂಕಿತರ ಸಂಖ್ಯೆ 40ಕ್ಕೆ ಏರಿಕೆಯಾಗಿದೆ.
ಕಂಟೈನ್ಮೆಂಟ್ಗೆ ಜೋನ್ / ಬಫರ್ ಜೋನ್
ಪ್ರಸ್ತುತ ನಗರಸಭೆ ವ್ಯಾಪ್ತಿಯ ವಾಸವಿ ರಸ್ತೆ, ಗಾಣಿಗರಪೇಟೆ, ವಿಠೋಭರಸ್ತೆ, ರೋಜಿಪುರ, ಭುವನೇಶ್ವರ ನಗರ, ಇಸ್ಲಾಂಪುರ, ಚೈತನ್ಯನಗರ, ಲಕ್ಷ್ಮೀ ಟಾಕೀಸ್ ರಸ್ತೆ.ಗ್ರಾಮಾಂತರ ವ್ಯಾಪ್ತಿಯ ಪಿಂಡಕೂರತಿಮ್ಮನಹಳ್ಳಿ, ಕೊಡಿಗೇಹಳ್ಳಿ ರಸ್ತೆಯ ಜಾಲಪ್ಪ ಕಾಲೇಜು ಹಿಂಭಾಗ, ದರ್ಗಾಜೋಗಹಳ್ಳಿ, ಪಾಲನಜೋಗಳ್ಳಿ, ರಾಜೀವ್ಗಾಂಧಿ ಬಡಾವಣೆ, ಕಾವೇರಿ ಬಡಾವಣೆ (ಕುರುಬರಹಳ್ಳಿ 2ನೇ ಹಂತ) ಚಿಕ್ಕಮಂಕಲಾಳ.ತಿಪ್ಪಾಪುರ,ದೊಡ್ಡಹೆಜ್ಜಾಜಿ,ಚಿಕ್ಕಮಂಕನಾಳ,ಉಜ್ಜನಿ ಕಾಲೋನಿ, ಪಿಂಡಕೂರು ತಿಮ್ಮನಹಳ್ಳಿ ಕಂಟೈನ್ಮೆಂಟ್ಗೆ ಒಳಪಟ್ಟ ಪ್ರದೇಶಗಳನ್ನಾಗಿಸಿದ್ದು,ಈ ವ್ಯಾಪ್ತಿಯ ಸುತ್ತ ಮುತ್ತಲಿನ ರಸ್ತೆ ಮತ್ತು ಪ್ರದೇಶಗಳನ್ನು ಬಫರ್ ಜೋನ್ ಎಂದು ಘೋಷಿಸಲಾಗಿದೆ.
ಕರೊನಾ ಪಟ್ಟಿಯಲ್ಲಿ ನಾಲ್ಕನೆ ಸ್ಥಾನಕ್ಕೇರಿದ ಬೆಂ.ಗ್ರಾ.ಜಿಲ್ಲೆ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ಪಟ್ಟಿಯಂತೆ.ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 68 ಪ್ರಕರಣಗಳು ದೃಢ ಪಟ್ಟಿವೆ.
ದೇವನಹಳ್ಳಿ: 06, ದೊಡ್ಡಬಳ್ಳಾಪುರ: 18, ಹೊಸಕೋಟೆ: 08, ನೆಲಮಂಗಲ: 21 ಹಾಗೂ ಬೆಂಗಳೂರು ನಗರ ಜಿಲ್ಲೆ: 15 ಪ್ರಕರಣಗಳು ದೃಢಪಟ್ಟಿದೆ.