ದೊಡ್ಡಬಳ್ಳಾಪುರ: ಲಾಕ್‌ಡೌನ್ ತೆರವಾದರು ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ಅಕ್ಕಪಕ್ಕದ ತಾಲೂಕುಗಳಲ್ಲಿ ಕರೊನಾ ಸೋಂಕು ವ್ಯಾಪಿಸುತ್ತಿರುವುದರಿಂದ,ಕರೊನಾ ಸೋಂಕು ಪರಸ್ಥಳದವರಿಂದ ಗ್ರಾಮಕ್ಕೆ ಹರಡುವುದನ್ನು ತಡೆಗಟ್ಟಲು ಸಾಸಲು ಗ್ರಾಮಸ್ಥರು ಸ್ವಯಂ ಪ್ಲಾನ್ ಮಾಡಿಕೊಂಡಿದ್ದಾರೆ.
ಈ ಪ್ಲಾನ್ ಅನ್ವಯ ಗ್ರಾಮದಲ್ಲಿ ಬುಧವಾರದಿಂದ ಪರಸ್ಥಳದವರು ಬರಲು ಕಾರಣವಾಗುವಂತಹ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ವ್ಯಾಪಾರ ವಹಿವಾಟು ನಿಲ್ಲಿಸುತ್ತಿದ್ದಾರೆ.ಇದೇ ವೇಳೆ ಸ್ವಗ್ರಾಮದವರಿಗೆ ಅಗತ್ಯ ವಸ್ತುಗಳಿಗೆ ಅನಾನುಕೂಲವಾಗದಂತೆ ಪ್ರತಿ ದಿನ ಬೆಳಗ್ಗೆ 5 ರಿಂದ 9ರವರೆಗೆ ಹಾಗೂ ಸಂಜೆ 6 ರಿಂದ 9ರವರೆಗೆ ಅಂಗಡಿಗಳನ್ನು ತೆರೆಯಲು ತೀರ್ಮಾನಿಸಿದ್ದಾರೆ.
ಕೋವಿಡ್-19 ತಡೆಗಟ್ಟಲು ಗ್ರಾಮಸ್ಥರು ಕೈಗೊಂಡಿರುವ ಸ್ವಯಂ ಪ್ರೇರಿತ ತೀರ್ಮಾನ ಪ್ರಶಂಸನೀಯವಾಗಿದ್ದು,ಸಾಸಲು ಗ್ರಾಮಪಂಚಾಯಿತಿ ಸಹ ಬೆಂಬಲವನ್ನು ನೀಡಿದೆ ಎಂದು ಪಿಡಿಒ ತಿರುಪತಿ ಹರಿತಲೇಖನಿಗೆ ತಿಳಿಸಿದ್ದಾರೆ.