ದೊಡ್ಡಬಳ್ಳಾಪುರ: ತಾಲೂಕಿಗೆ ಕರೊನಾ ಭಾನುವಾರದ ರಜೆ ನೀಡಿದ್ದು,ಇಂದು ಯಾವುದೇ ವ್ಯಕ್ತಿಯಲ್ಲಿ ಸೋಂಕು ದೃಢಪಟ್ಟಿಲ್ಲವೆಂದು ತಾಲೂಕು ಆಡಳಿತದ ವರದಿ ತಿಳಿಸಿದೆ.
ಹರಿತಲೇಖನಿಗೆ ದೊರೆತಿರುವ ತಹಶಿಲ್ದಾರ್ ಟಿ.ಎಸ್.ಶಿವರಾಜ್ ಅವರು ಬಿಡುಗಡೆ ಮಾಡಿರುವ ಭಾನುವಾರದ ಕರೊನಾ ಬುಲೆಟಿನ್ ವರದಿಯಂತೆ,ತಾಲೂಕಿನಲ್ಲಿ ಯಾರಿಗೂ ಸೋಂಕು ದೃಢ ಪಟ್ಟಿಲ್ಲ ಎನ್ನಲಾಗಿದೆ.
ಉಳಿದಂತೆ ತಾಲೂಕಿನಲ್ಲಿ 516 ಕರೊನಾ ಪ್ರಕರಣಗಳಾಗಿದ್ದು,16 ಮಂದಿ ಮೃತ ಪಟ್ಟು, 199 ಮಂದಿ ಗುಣಮುಖರಾಗಿ ಮನೆಗೆ ಮರಳಿದ್ದಾರೆ.
ಸೋಂಕಿಗೆ ಒಳಗಾದ 33 ಮಂದಿಯನ್ನು ದೊಡ್ಡಬಳ್ಳಾಪುರ ಕೊವಿಡ್ ಕೇರ್ ಸೆಂಟರ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು,ಉಳಿದ 268 ಮಂದಿಯನ್ನು ದೇವನಹಳ್ಳಿ / ಹಜ್ ಭವನ /ಖಾಸಗಿ ಆಸ್ಪತ್ರೆ / ಹೊಂ ಹೈಸೋಲೇಷನ್ / ಇಸ್ತೂರಿನ ವಸತಿ ನಿಲಯ / ಬಚ್ಚಹಳ್ಳಿ ವಸತಿ ನಿಲಯ / ಬೆಂಗಳೂರಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.