ಬೆಂಗಳೂರು: ನಗರದ ಹೆಣ್ಣೂರು, ಬಾಗಲೂರು, ಮತ್ತು ಕೊತ್ತನೂರು ಪ್ರದೇಶಗಳಲ್ಲಿ ಕಾನೂನು ಬಾಹಿರವಾಗಿ ವಾಸವಿದ್ದ,ವಿದೇಶಿಯರ ಮನೆಗಳ ಮೇಲೆ ನಗರದ ಸಿಸಿಬಿ ತಂಡವು 120 ಅಧಿಕಾರಿಗಳೊಂದಿಗೆ ಇಂದು ಮುಂಜಾನೆ ವಿಶೇಷ ಕಾರ್ಯಾಚರಣೆ ಮೂಲಕ ದಾಳಿ ನಡೆಸಿದೆ.
ಈ ವೇಳೆ 85 ವಿದೇಶಿಯರನ್ನು ತಪಾಸಣೆ ಮಾಡಲಾಗಿ,20 ಮಂದಿ ಆಫ್ರಿಕಾದ ಪ್ರಜೆಗಳು ಮಾನ್ಯತೆಯಿಲ್ಲದ ಪಾಸ್ ಪೋರ್ಟ್ & ವೀಸಾ ಹೊಂದಿರುವುದು ಕಂಡು ಬಂದಿರುತ್ತದೆ. ಇವರಿಂದ ಭಾರತ, ಅಮೇರಿಕ, ಮತ್ತು ಯುಕೆ ದೇಶಗಳ ನಕಲಿ ನೋಟುಗಳು,ಲ್ಯಾಪ್ ಟಾಪ್ ನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಳ್ಳಲಾಗಿ, ಇವರುಗಳು ಸೈಬರ್ ಅಪರಾಧಗಳನ್ನು ಮಾಡುತ್ತಿರುವ ಬಗ್ಗೆ ಶಂಕೆ ಮೂಡಿದ್ದು,ತನಿಖೆ ಮುಂದುವರಿದಿದೆ.