ಮೈಸೂರು: ಅರಮನೆ ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ಶ್ರೀ ಗಣೇಶ ವ್ರತವನ್ನು ಮೈಸೂರು ಅರಮನೆಯಲ್ಲಿ ಇಂದು ಆಚರಿಸಿದ ಬಗ್ಗೆ ರಾಜವಂಶದ ಉತ್ತರಾಧಿಕಾರಿ ಯದುವೀರ್ ಒಡೆಯರ್ ಫೋಟೋ ಪೋಸ್ಟ್ ಮಾಡಿದ್ದಾರೆ.
ಈ ವೇಳೆ ನಮಗೆದುರಾಗಿರುವ ಎಲ್ಲ ವಿಘ್ನಗಳನ್ನು ಉಪಶಮನ ಮಾಡಿ ನಮ್ಮೆಲ್ಲರಿಗೆ ಸಮಸ್ತ ಸನ್ಮಂಗಳವನ್ನುಂಟು ಮಾಡಲಿ ಎಂದು ಶ್ರೀ ಆತ್ಮವಿಲಾಸ ಗಣಪತಿಯಲ್ಲಿ ಪ್ರಾರ್ಥಿಸಲಾಯಿತು ಎಂದು ಪೋಸ್ಟ್ ನಲ್ಲಿ ಯದುವೀರ್ ಬರೆದಿದ್ದಾರೆ.