ದೊಡ್ಡಬಳ್ಳಾಪುರ: ಬಹು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ನಗರಸಭೆ ಆಶ್ರಯ ಸಮಿತಿಗೆ ಸದಸ್ಯರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಸಮಿತಿಯ ನಾಮ ನಿರ್ದೇಶಕ ಸದಸ್ಯರಾಗಿ ದೊಡ್ಡಬಳ್ಳಾಪುರ ನಗರದ ಎಸ್. ಲಕ್ಷ್ಮೀನಾರಾಯಣ್, ಎಂ.ಕೃಷ್ಣಮೂರ್ತಿ, ಪಿ.ಕೃಷ್ಣಪ್ಪ, ಅಮ್ರಾನ್‌ತಾಜ್ ಅವರನ್ನು ನೇಮಕ ಮಾಡಿ ಸರ್ಕಾರದ ಅಧೀನ ಕಾರ್ಯದರ್ಶಿ ಜಿ.ಲಕ್ಷ್ಮಣ ಅವರು ಆದೇಶ ಹೊರಡಿಸಿದ್ದಾರೆ.