ದೊಡ್ಡಬಳ್ಳಾಪುರ: ತಾಲ್ಲೂಕಿನಲ್ಲಿ ಅವಧಿ ಮುಕ್ತಾಯವಾಗಿ ಚುನಾವಣೆ ನಡೆಯಲಿರುವ 26 ಗ್ರಾಮ ಪಂಚಾಯಿತಿಗಳ 243 ಮತಗಟ್ಟೆಗಳಲ್ಲಿನ ಮತದಾರರ ಭಾವಚಿತ್ರ ಸಹಿತ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿತ್ತು. ಕರಡು ಮತದಾರರ ಪಟ್ಟಿಗೆ ಸ್ವೀಕರಿಸಲಾದ ಹಕ್ಕು ಆಕ್ಷೇಪಣೆಗಳನ್ನು ಇತ್ಯರ್ಥಪಡಿಸಿ ಆಗಸ್ಟ್ 31 ರಂದು ಭಾವಚಿತ್ರ ಇರುವ ಅಂತಿಮ ಮತದಾರರ ಪಟ್ಟಿಯನ್ನು ಎಲ್ಲಾ ಮತಗಟ್ಟೆ, ನಾಡ ಕಚೇರಿ ಹಾಗೂ ತಾಲ್ಲೂಕು ಕಚೇರಿಯಲ್ಲಿ ಸಾರ್ವಜನಿಕವಾಗಿ ಪ್ರಕಟಿಸಲಾಗಿದೆ ಎಂದು ತಹಶೀಲ್ದಾರ್ ಟಿ.ಎಸ್.ಶಿವರಾಜ್ ತಿಳಿಸಿದ್ದಾರೆ.