ದೊಡ್ಡಬಳ್ಳಾಪುರ: ತಾಲೂಕು ಆಡಳಿತ ಬಿಡುಗಡೆ ಮಾಡಿರುವ ಸೋಮವಾರದ ಬುಲೆಟಿನ್ ಮಾಹಿತಿಯಂತೆ ತಾಲೂಕಿನ 15 ಜನರಿಗೆ ಕರೊನಾ ಸೋಂಕು ದೃಢಪಟ್ಟಿದ್ದು,ಸೋಂಕಿತ ಮೂರು ಮಂದಿಯಲ್ಲಿ ಇಬ್ಬರು ಹೃದಯಾಘಾತ ಹಾಗೂ ಓರ್ವ ತೀವ್ರ ಉಸಿರಾಟದ ತೊಂದರೆ ಸಾವನಪ್ಪಿದ್ದಾರೆ.
ತಹಶಿಲ್ದಾರ್ ಟಿ.ಎಸ್.ಶಿವರಾಜ್ ಅವರು ಬಿಡುಗಡೆ ಮಾಡಿರುವ ತಾಲೂಕಿನ ಹೆಲ್ತ್ ಬುಲೆಟಿನ ಅನ್ವಯ,ಸೋಮವಾರದ ಸಂಜೆಯ ವರಗೆ.ದೊಡ್ಡಬಳ್ಳಾಪುರ ತಾಲ್ಲೂಕಿನ 12 ಪುರುಷರು ಹಾಗೂ 4 ಮಹಿಳೆಯರು ಸೇರಿ 16 ಜನರಿಗೆ ಸೋಂಕು ದೃಡಪಟ್ಟಿದೆ.
ಹರಿತಲೇಖನಿಗೆ ದೊರೆತಿರುವ ಮಾಹಿತಿಯಂತೆ. ಸೋಂಕಿಗೆ ಒಳಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೋಟೆ ಬೀದಿಯ 50 ವರ್ಷದ ಪುರುಷ, ದೊಡ್ಡಬಳ್ಳಾಪುರ ಕೋವಿಡ್ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಲೆಪೇಟೆಯ 76 ವರ್ಷದ ಪುರುಷ ಹೃದಯಾಘಾತದಿಂದ ಸಾವನಪ್ಪಿದ್ದಾರೆ.ಅಲ್ಲದೆ ನಾಗವಾರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೈಲ್ವೇ ಸ್ಟೇಷನ್ ಸಮೀಪದ 60 ವರ್ಷದ ಪುರುಷ ತೀವ್ರ ಉಸಿರಾಟದ ತೊಂದರೆ,ಅನಿಯಂತ್ರಿತ ಸಕ್ಕರೆ ಕಾಯಿಲೆಯಿಂದ ಸಾವನಪ್ಪಿದ್ದಾರೆಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.
ಉಳಿದಂತೆ ಕೋರ್ಟ್ ರಸ್ತೆ,ಕೋಳೂರಿನಲ್ಲಿ ತಲಾ 2, ಸೋಮೇಶ್ವರ ಬಡಾವಣೆ, ಬ್ಯಾಕ್ ಸರ್ಕಲ್, ಓಬದೇನಹಳ್ಳಿ, ದೇವರಾಜನಗರ, ರೈಲ್ವೆ ಸ್ಟೇಷನ್, ರೋಜಿಪುರ, ಕೋಟೆ ಬೀದಿ, ಕತ್ತಿ ಹೊಸಹಳ್ಳಿ, ಕನ್ನಮಂಗಲ ಕಾಲೋನಿ, ಕಾಮಸಂದ್ರ, ಎಲೇಪೇಟೆ, ಹಾಗೂ ತುಮಕೂರು ನಿವಾಸಿ ಮಚ್ಚೇನಹಳ್ಳಿಯ ತಲಾ ಒಬ್ಬರಲ್ಲಿ ಸೊಂಕು ದೃಢಪಟ್ಟಿದೆ.
ಪ್ರಸ್ತುತ ತಾಲೂಕಿನಲ್ಲಿ 1395 ಮಂದಿಗೆ ಸೋಂಕು ತಗುಲಿದ್ದು, 894 ಮಂದಿ ಗುಣಮುಖರಾಗಿದ್ದರೆ 46 ಮಂದಿ ಸಾವನಪ್ಪಿದ್ದಾರೆ.
ಸೋಂಕಿಗೆ ಒಳಗಾದ 56 ಮಂದಿಯನ್ನು ದೊಡ್ಡಬಳ್ಳಾಪುರ ಕೊವಿಡ್ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು,ಉಳಿದ 399 ಮಂದಿಯನ್ನು ದೇವನಹಳ್ಳಿ / ಹಜ್ ಭವನ/ಖಾಸಗಿ ಆಸ್ಪತ್ರೆ / ಹೊಂ ಹೈಸೋಲೇಷನ್ / ಇಸ್ತೂರಿನ ವಸತಿ ನಿಲಯ / ಬಚ್ಚಹಳ್ಳಿ ವಸತಿ ನಿಲಯ / ಬೆಂಗಳೂರಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.