ದೊಡ್ಡಬಳ್ಳಾಪುರ: ವಿಶ್ವ ದೃಷ್ಟಿ ದಿನ ಪ್ರಯುಕ್ತ ವರ್ಲ್ಡ್ ಬ್ಲೈಂಡ್ ವಾಕ್ ಕಾರ್ಯಕ್ರಮವನ್ನು ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾವತಿಯಿಂದ ಏರ್ಪಡಿಸಲಾಗಿತ್ತು.
ವರ್ಲ್ಡ್ ಬ್ಲೈಂಡ್ ವಾಕ್ ಕಾರ್ಯಕ್ರಮದ ಅಂಗವಾಗಿ ಕಣ್ಣಿಗೆ ಬಟ್ಟೆಕಟ್ಟಿಕೊಂಡು ನೆಲದಾಂಜನೆಯ ಸ್ವಾಮಿ ದೇವಾಲಯದ ಆವರಣದಿಂದ ಕೋಟೆ ರಸ್ತೆ, ಸಿನಿಮಾರಸ್ತೆ, ಕೊಂಗಾಡಿಯಪ್ಪ ಮುಖ್ಯ ರಸ್ತೆ ಮೂಲಕ ಸಾಗಿದ ಮುಖಂಡರು. ಚೌಕದ ರಸ್ತೆ, ಸೌಂದರ್ಯ ಮಹಲ್ ವೃತ್ತ ಹಾಗೂ ಗಾಂಧಿ ವೃತ್ತದಿಂದ ಮತ್ತೆ ನೆಲದಾಂಜನೆಯ ಸ್ವಾಮಿ ದೇವಾಲಯದ ಬಳಿ ಅಂತ್ಯಗೊಳಿಸಿದರು.
ಈ ವೇಳೆ ನಗರ ಘಟಕದ ಅಧ್ಯಕ್ಷ ಹೆಚ್.ಎಸ್.ಶಿವಶಂಕರ್, ಮುಖಂಡರಾದ ವತ್ಸಲ, ಸುಶಿಲಮ್ಮರಾಘವ, ನಯನ, ಗಾಳಿಪಟ ಪ್ರಕಾಶ್, ಬಾಲು ಸೇರಿಂದ ಬಿಜೆಪಿಯ ವಿವಿಧ ಘಟಕಗಳ ಮುಖಂಡರು ಹಾಜರಿದ್ದರು.
ಈ ವೇಳೆ ನಗರ ಘಟಕದ ಅಧ್ಯಕ್ಷ ಹೆಚ್.ಎಸ್.ಶಿವಶಂಕರ್, ಮುಖಂಡರಾದ ವತ್ಸಲ, ಸುಶಿಲಮ್ಮರಾಘವ, ನಯನ, ಗಾಳಿಪಟ ಪ್ರಕಾಶ್, ಬಾಲು ಸೇರಿಂದ ಬಿಜೆಪಿಯ ವಿವಿಧ ಘಟಕಗಳ ಮುಖಂಡರು ಹಾಜರಿದ್ದರು.