ದೊಡ್ಡಬಳ್ಳಾಪುರ: ಕಳೆದ ಕೆಲ ದಿನಗಳಿಂದ ಸದ್ದಡಗಿಸಿಕೊಂಡಿದ್ದ ಬ್ಲಾಕ್ ಪಲ್ಸರ್ ಕಳ್ಳರು ಮತ್ತೆ ತಮ್ಮ ಬಾಲ ಬಿಚ್ಚಿದ್ದು, ತಾಲೂಕಿನ ರಾಮಾದೇನಹಳ್ಳಿ ಗ್ರಾಮದಲ್ಲಿ ಗೃಹಿಣಿಯೋರ್ವರ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಗುರುವಾರ ನಡೆದಿದೆ.
ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯ ರಾಮದೇನಹಳ್ಳಿಯ ಗೃಹಿಣಿಯೋರ್ವರು ನಡೆದುಕೊಂಡು ಹೋಗುವಾಗ, ಬ್ಲಾಕ್ ಪಲ್ಸರ್ ನಲ್ಲಿ ಬಂದ ಕಳ್ಳರು ಏನೋ ಬಿದ್ದಿದೆ ಎಂದು ಗೃಹಿಣಿಯ ದಿಕ್ಕುತಪ್ಪಿಸಿ, ಸುಮಾರು 40 ಗ್ರಾಂ ತೂಕದ ಮಾಂಗಲ್ಯ ಸರ ಕಿತ್ತು ಪರಾರಿಯಾಗಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ವ್ಯಾಪ್ತಿಯಲ್ಲಿ ಇದು ಎರಡನೇ ಪ್ರಕರಣವಾಗಿದ್ದು ಗೃಹಿಣಿಯರು ಹೆಚ್ಚರವಹಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

