ದೊಡ್ಡಬಳ್ಳಾಪುರ: ತಾಲೂಕಿನ ಮುಕ್ಕೇನಹಳ್ಳಿ ಗ್ರಾಮದ ಎ.ಚಂದ್ರಶೇಖರ್ ಎಂಬ ರೈತರು ರಾಗಿ ಬಣವೆ ಆಕಸ್ಮಿಕ ಬೆಂಕಿಗೆ ಆಹುತಿಯಾಗಿದ್ದು, ಸುಮಾರು 30 ಸಾವಿರ ಮೌಲ್ಯದ ರಾಗಿ ಹುಲ್ಲು ನಷ್ಟವಾಗಿದೆ. ಈ ಕುರಿತು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಕ್ಕದಲ್ಲೆ ಇದ್ದ ನೀಲಗಿರಿ ತೋಪಿಗೆ ಬೆಂಕಿ ಬಿದ್ದಿತ್ತು. ಪರಿಣಾಮ ಅತಿ ವೇಗದಲ್ಲಿ ಆವರಿಸಿದ ಬೆಂಕಿ ತೋಪಿನ ಪಕ್ಕದಲ್ಲೆ ಇದ್ದ ರಾಗಿ ಬಣವೆಗೆ ಆವರಿಸಿದೆ. ಜಾಗೃತರಾದ ಗ್ರಾಮಸ್ಥರು ಬೆಂಕಿ ನಂದಿಸುವ ಹಿತ್ತಿಗೆ ರಾಗಿ ಹುಲ್ಲು ಬೆಂಕಿಗೆ ಆಹುತಿಯಾಗಿತ್ತು. ಆದರೆ ಗ್ರಾಮಸ್ಥರ ಪ್ರಯತ್ನದಿಂದ ಪಕ್ಕದಲ್ಲೆ ಮತ್ತಷ್ಟು ಹುಲ್ಲಿನ ಬಣವೆಗಳು ಬೆಂಕಿಯ ಕೆನ್ನಾಲಿಗೆಯಿಂದ ತಪ್ಪಿಸಿಕೊಂಡಿವೆ.
ಇತ್ತೀಚೆಗೆ ತೀವ್ರಗೊಳ್ಳುತ್ತಿರುವ ಬಿಸಿಲಿನ ಬೇಗೆ ಪರಿಣಾಮ ನೀಲಗಿರಿ ತೋಪುಗಳ ಮೇಲೆ ಬೆಂಕಿ ಅವಘಡ ನಿರಂತರವಾಗಿ ನಡೆಯುತಿವೆ. ಪರಿಣಾಮ ತೋಪಿನ ಪಕ್ಕದಲ್ಲೆ ಇರುವ ಬಹುತೇಕ ರಾಗಿ ಹುಲ್ಲಿನ ಬಣವೆಗಳು ಬೆಂಕಿಗೆ ಆಹುತಿಯಾಗುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್, ಕೂ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ.