ದೊಡ್ಡಬಳ್ಳಾಪುರ: ದೈಹಿಕ ಶ್ರಮ, ದೇಶಿಯ ಕೌಶಲ್ಯವನ್ನು ಹೊಂದಿರುವ ಕಬಡ್ಡಿ ನಮ್ಮ ಜನಪದರ ನೆಚ್ಚಿನ ಆಟವಾಗಿ ಇಂದಿಗೂ ಜನಪ್ರಿಯತೆಯನ್ನು ಉಳಿಸಿಕೊಂಡು ಬಂದಿದೆ ಎಂದು ಲೇಖಕ ಹಾಗೂ ಪತ್ರಕರ್ತ ಮಂಜುನಾಥ ಎಂ.ಅದ್ದೆ ಹೇಳಿದರು.
ಅವರು ನಗರದ ಕೆರೆಬಾಗಿನಲ್ಲಿ ಪ್ರಸನ್ನ ಲಕ್ಷ್ಮೀವೆಂಕಟರಮಣಸ್ವಾಮಿ ಬ್ರಹ್ಮ ರಥೋತ್ಸವದ ಅಂಗವಾಗಿ ಭಾನುವಾರ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಬಡ್ಡಿ ಅಸೋಸಿಯೇಷನ್ ವತಿಯಿಂದ ನಡೆದ ಹೊನಲು ಬೆಳಕಿನ ಪುರುಷರ ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.
ಕ್ರೀಡೆ ಅಂದರೆ ಕ್ರಿಕೇಟ್ ಮಾತ್ರವಷ್ಟೇ ಅಲ್ಲ. ಯುವ ಸಮೂಹದ ದೈಹಿಕ ಶಕ್ತಿ ಪ್ರದರ್ಶನಕ್ಕೆ ಹೆಸರಾಗಿರುವ ಕಬಡ್ಡಿಗು ಸೂಕ್ತ ಪ್ರಾತಿನಿಧ್ಯವನ್ನು ನೀಡಬೇಕು. ಅಂತರ ರಾಷ್ಟ್ರೀಯ ಮಟ್ಟದವರೆಗೂ ಕಬಡ್ಡಿಯಲ್ಲಿ ಹೆಸರು ಮಾಡಲು ಸಾಕಷ್ಟು ಅವಕಾಶಗಳು ಈಗ ಇವೆ. ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಸಾಕಷ್ಟು ಜನ ಯುವ ಕಬಡ್ಡಿ ಪಟುಗಳು ಇದ್ದಾರೆ. ಸೂಕ್ತ ವೇದಿಕೆಯನ್ನು ಸಂಘ ಸಂಸ್ಥೆಗಳು ಕಲ್ಪಿಸುವ ಮೂಲಕ ಉನ್ನತ ಮಟ್ಟದ ಸಾಧನೆ ಮಾಡಲು ಪ್ರೋತ್ಸಾಹ ನೀಡಬೇಕಿದೆ ಎಂದರು.
ಕೃಷಿ ಮಾರುಕಟ್ಟೆ ನಿರ್ದೇಶಕ ಸಿ.ಎಸ್.ಕರೀಗೌಡ ಮಾತನಾಡಿ, ಗ್ರಾಮೀಣ ಯುವಕರು ವಿನಾಕರಣ ಸಮಯವನ್ನು ವ್ಯರ್ಥ ಮಾಡದೆ ಕಬಡ್ಡಿ ಸೇರಿದಂತೆ ದೇಶಿಯ ಕ್ರೀಡೆಗಳಲ್ಲಿ ಬಿಡುವಿನ ಸಮಯದಲ್ಲಿ ತೊಡಗಿಸಿಕೊಂಡರೆ ದೈಹಿಕ, ಮಾನಸಿಕ ಆರೋಗ್ಯ ಎಲ್ಲವು ಸುಧಾರಣೆಯಾಗಲಿದೆ. ವಾಟ್ಸ್ ಆಪ್, ಫೇಸ್ ಬುಕ್ಗಳಲ್ಲಿ ಕಾಲಹಣ ಮಾಡುವುದರಿಂದ ದೂರ ಇರಬೇಕಿದೆ ಎಂದರು.
ಕಬಡ್ಡಿ ಪಂದ್ಯಾವಳಿ ಉದ್ಘಾಟನ ಸಮಾರಂಭದಲ್ಲಿ ಕೆಎಎಸ್ ಅಧಿಕಾರಿ ಡಾ.ನೆಲ್ಲುಕುಂಟೆ ವೆಂಕಟೇಶಯ್ಯ, ಹಿರಿಯ ಕ್ರೀಡಾ ಪ್ರೋತ್ಸಾಹಕ ಬಿ.ಎಚ್.ಕೆಂಪಣ್ಣ, ಐಟಿ ಎಂಜಿನಿಯರ್ ಜಿ.ರಾಜಶೇಖರ,ಕಬಡ್ಡಿ ಪಂದ್ಯಾವಳಿ ಆಯೋಜಕರಾದ ಜಿ.ಯಲ್ಲಪ್ಪ, ನರೇಂದ್ರ, ರವಿಚಂದ್ರನ್, ಲಕ್ಷೀಶ, ಶರಣಪ್ಪ,ರಾಮಮೂರ್ತಿ ಇದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….