ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ಜೈನ ಸಮುದಾಯದವರಿಂದ, ಅಹಿಂಸೆಯ ಸಾಕಾರಮೂರ್ತಿ ಭಗವಾನ್ ಶ್ರೀ ಮಹಾವೀರ ಜಯಂತಿಯನ್ನು ಶ್ರದ್ಧಾ ಭಕ್ತಿಗಳಿಂದ ಆಚರಿಸಲಾಯಿತು.
ಕರೊನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ವಾರಾಂತ್ಯದ ಕಪ್ರ್ಯೂ ಘೋಷಿಸಿರುವುದರಿಂದ ಮಹಾವೀರ ಜಯಂತಿ ಅಂಗವಾಗಿ ನಗರದ ಆಸ್ಪತ್ರೆ ವೃತ್ತದ ಬಳಿಯಿರುವ ಶ್ರೀ ಮಹಾವೀರ ಜೈನ ಶ್ವೇತಾಂಬರ್ ಮಂದಿರದಲ್ಲಿ ಯಾವುದೇ ಉತ್ಸವ, ಹಾಗೂ ಹೆಚ್ಚು ಭಕ್ತರ ಭಾಗವಹಿಸುವಿಕೆ ಇಲ್ಲದೇ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು.
ಜೈನ ಸಮುದಾಯದವರು ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಿದರು. ಬೆಳಗ್ಗೆ 9 ಗಂಟೆಗೆ ಘಂಟಾನಾದ, ಶಂಖನಾದ, ಜಾಗಟೆಯನ್ನು ಬಾರಿಸಿ ಪ್ರಭುವಿನ ಜನ್ಮದಿನವನ್ನು ಆಚರಿಸಲಾಯಿತು.
ಭಗವಂತ ಇಡೀ ವಿಶ್ವವನ್ನು ಕೊರನಾ ಮಹಾಮಾರಿಯಿಂದ ಅತಿಶೀಘ್ರದಲ್ಲಿ ಮುಕ್ತಿ ಮಾಡಲಿ ಎಂದು ಪ್ರಾರ್ಥನೆ ಮಾಡಿದರು.
ಪ್ರಾಣಿ-ಪಕ್ಷಿಗಳಿಗೆ ನೀರು ಕುಡಿಯಲು ವ್ಯವಸ್ಥೆ: ಬೇಸಿಗೆ ಇರುವುದರಿಂದ ಪ್ರಾಣಿ-ಪಕ್ಷಿಗಳಿಗೆ ನೀರು ಕುಡಿಯಲು ತೊಂದರೆಯಾಗುತ್ತಿದೆ ಅದರಲ್ಲೂ ನಗರದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ನೀವು ಜೀವಿಸಿ ಜೀವಿಸಲು ಬಿಡಿ ಎನ್ನುವ ಮಹಾವೀರ ಅವರ ಸಂದೇಶ ಸಾರುವಲ್ಲಿ ಜೈನ ಸಮುದಾಯದ ಮಹಿಳೆಯರಿಂದ ಮೂಕ ಜೀವಿಗಳಿಗೆ ನೀರು ಧ್ಯೇಯದೊಂದಿಗೆ ಮನೆಗಳ ಮುಂದೆ ನೀರಿನ ಸಿಮೆಂಟ್ ಬಟ್ಟಲುಗಳನ್ನು ಇಡುವ ಕಾರ್ಯಕ್ಕೆ ಚಾಲನೆ ನೀಡಿದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….