ಬೆಂ.ಗ್ರಾ.ಜಿಲ್ಲೆ: ಆರನೇ ದಿನ ಕರೊನಾ ಕರ್ಫ್ಯೂ ಅಂತ್ಯದ ವೇಳೆಗೆ ಕೋವಿಡ್-19 ಬುಲೆಟಿನ್ ವರದಿಯನ್ನು ಜಿಲ್ಲಾಡಳಿತ ಬಿಡುಗಡೆ ಮಾಡಿದೆ.
ಮಂಗಳವಾರದ ವರದಿಯನ್ವಯ ದೊಡ್ಡಬಳ್ಳಾಪುರ ತಾಲೂಕಿನ 215 ಪುರುಷರು, 130 ಮಹಿಳೆಯರು ಸೇರಿ 345 ಮಂದಿ. ಹೊಸಕೋಟೆ ತಾಲೂಕಿನ 168 ಪುರುಷರು, 94 ಮಹಿಳೆಯರು ಸೇರಿ 262. ನೆಲಮಂಗಲ ತಾಲೂಕಿನ 149 ಪುರುಷರು, 83 ಮಂದಿ ಮಹಿಳೆಯರು ಸೇರಿ 232 ಹಾಗೂ ದೇವನಹಳ್ಳಿ ತಾಲೂಕಿನ 85 ಪುರುಷರು, 58 ಮಹಿಳೆಯರು ಸೇರಿ 143 ಮತ್ತು ಅನ್ಯ ಜಿಲ್ಲೆಯವರು ಸೇರಿದಂತೆ ಬೆಂ.ಗ್ರಾ.ಜಿಲ್ಲೆಯಲ್ಲಿ 996 ಜನರಿಗೆ ಸೋಂಕು ದೃಢಪಟ್ಟಿದೆ ಎನ್ನಲಾಗಿದೆ.
ಮೃತರ ವರದಿ: ದೊಡ್ಡಬಳ್ಳಾಪುರ ತಾಲೂಕಿನ ಓರ್ವ ಪುರುಷ, ನೆಲಮಂಗಲ ಹಾಗೂ ದೇವನಹಳ್ಳಿ ತಾಲೂಕಿನ ತಲಾ ಇಬ್ಬರು ಮಹಿಳೆಯರು ಸಾವನಪ್ಪಿದ್ದಾರೆ.
ಪ್ರಸ್ತುತ ಜಿಲ್ಲೆಯಲ್ಲಿ 1083 ಮಂದಿ ಸೋಂಕಿತರಿಗೆ ನಿಗಾ ಘಟಕದಲ್ಲಿಡಲಾಗಿದೆ ಎನ್ನಲಾಗುತ್ತಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 9814 ಕ್ಕೆ ಏರಿಕೆಯಾಗಿದ್ದರೆ, 14018 ಮಂದಿಯನ್ನು ಕಡ್ಡಾಯ ಗೃಹ ಬಂಧನದಲ್ಲಿ ಇಡಲಾಗಿದೆ. ಹಾಗೂ 257 ಮಂದಿ ಗುಣಮುಖರಾಗಿ ಮನೆಗೆ ಮರಳಿದ್ದಾರೆ.
ಆರೋಗ್ಯ ಇಲಾಖೆಯಿಂದ ತಪಾಸಣೆ ತೀವ್ರವಾಗಿ ನಡೆಸಲಾಗುತ್ತಿದ್ದು, ಇಂದಿನ ವರದಿಯ ಪ್ರಕಾರ 4112 ಮಂದಿಯ ಮಂದಿಯ ಫಲಿತಾಂಶ ಬಾಕಿ ಉಳಿದಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….