ದೊಡ್ಡಬಳ್ಳಾಪುರ: ಕೋವಿಡ್ ಸಂಕಷ್ಠದಲ್ಲಿ ತಾಲೂಕಿನಲ್ಲಿ ಯಾವ ರಾಜಕಾರಣಿಗಳು ರೋಡಿಗೆ ಬಂದಿದ್ದಾರೋ ಇಲ್ಲವೋ ಗೊತ್ತಿಲ್ಲ, ಆದರೆ ರಾಜ್ಯಾದ್ಯಂತ ಕರ್ನಾಟಕ ರಕ್ಷಣಾ ವೇದಿಕೆ ಜನಗಳ ನೆರವಿಗೆ ನಿಂತಿದ್ದೇವೆ. ಈ ಮೂಲಕ ಇಲ್ಲಿ ಕಿಟ್ ನೀಡುವ ಮೂಲಕ ಅವರನ್ನು ಸಾಕುತ್ತೇವೆ ಎಂಬ ಭಾವದೊಂದಿಗೆ ಆಹಾರ ಪದಾರ್ಥಗಳ ಕಿಟ್ ನೀಡುತ್ತಿಲ್ಲ. ಬದಲಾಗಿ ನಿಮ್ಮ ಜೊತೆ ನಾವಿದ್ದೇವೆ ಎಂಬ ಭದ್ರತಾ ಭಾವನೆಯನ್ನು ನೀಡುತ್ತಿದ್ದೇವೆ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಕುಮಾರ್ ಶೆಟ್ಟಿ) ಬಣದ ರಾಜ್ಯಾಧ್ಯಕ್ಷ ಪ್ರವೀಣ್‌ಕುಮಾರ್ ಶೆಟ್ಟಿ ತಿಳಿಸಿದರು.
ದೊಡ್ಡಬಳ್ಳಾಪುರ ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಕುಮಾರ್ ಶೆಟ್ಟಿ ಬಣದಿಂದ ತಾಲೂಕಿನ ಕೊನಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿಕಲಚೇತನರು, ಆಶಾ ಕಾರ್ಯಕರ್ತರು, ಗ್ರಾಮ ಪಂಚಾಯಿತಿ ವಾಟರ್ ಮ್ಯಾನ್ ಗಳಿಗೆ ಆಹಾರ ಪದಾರ್ಥಗಳು ಹಾಗು ತರಕಾರಿ ಸೇರಿದಂತ ಕಿಟ್ ವಿತರಣೆ ಮಾಡಿ ಅವರು ಮಾತನಾಡಿದರು.
ರಾಜ್ಯಾದ್ಯಂತ ಕೋವಿಡ್ ಸೇರಿದಂತೆ ವಿವಿಧ ಪ್ರಾಕೃತಿಕ ವಿಕೋಪಗಳು ಸಂಭವಿಸಿದಾಗ ರಾಜ್ಯಾದ್ಯಂತ ಕರವೇ ಹೋರಾಟಗಳಿಗಷ್ಟೆ ಸೀಮಿತವಾಗದೆ ಜನಗಳ ನೆರವಿಗೆ ಬಂದಿದೆ. ಇಂತಹ ಸಾಮಾಜಿಕ ಸೇವಾ ಕಾರ್ಯಗಳಿಗೆ ನಮ್ಮ ಸಂಘಟನೆ ನಿತ್ಯ ಮುಂಚೂಣಿಯಲ್ಲಿದೆ.
ಕೋವಿಡ್ ಸೋಂಕು ಅಂಟುವ ಅಪಾಯ ಇರುವ ಸರ್ಕಾರಿ ಆಸ್ಪತ್ರೆ ಮುಂಭಾಗವೇ ಸಸ್ಯಾಔಷಧದ ಕಷಾಯ, ಹಾಲು, ಬಿಸಿನೀರು, ಮೊಟ್ಟೆ, ಅಗತ್ಯ ಸಿದ್ದಾಹಾರ, ಹಣ್ಣುಗಳನ್ನು ರೋಗಿಗಳಿಗೆ ನೀಡುವ ಕಾರ್ಯವನ್ನು 21 ದಿನಗಳು ನಿರಂತರ ಮಾಡಿರುವುದು ರಾಜ್ಯದಲ್ಲೆ ಮೊದಲು ಎಂತಲೆ ಹೇಳಬೇಕು. ಇಂತಹ ಕಾರ್ಯ ಇಲ್ಲಿನ ರಾಜಘಟ್ಟ ರವಿ ಅವರ ನೇತೃತ್ವದಲ್ಲಿ ನಡೆದಿದ್ದು, ಅವರ ನಾಯಕತ್ವದ ಶಕ್ತಿ ಎಲ್ಲಾ ಹೋರಾಟಗಾರರಿಗೆ ಮಾದರಿಯಾಗಬೇಕಾದ ಅನಿವಾರ್ಯತೆ ಇದೆ ಎಂದು ಶ್ಲಾಘಸಿದರು.
ನಂತರ ಮಾತನಾಡಿದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಘಟ್ಟ ರವಿ, ಪ್ರಂಟ್ ಲೈನ್ ವಾರಿಯರ್ಸ್ ಆಗಿ ಸೋಂಕಿನ ಆತಂಕವನ್ನು ಮೀರಿ ಕಾರ್ಯ ನಿರ್ವಹಿಸುವ ಆಶಾ ಕಾರ್ಯಕರ್ತರು ಮತ್ತು ವಾಟರ್ ಮ್ಯಾನ್ ನಮ್ಮ ಕುಟುಂಬಗಳ ಸದಸ್ಯರೇ ಆಗಿದ್ದಾರೆ. ಹೀಗಾಗಿ ನಿಮ್ಮ ಜೊತೆ ನಾವಿದ್ದೇವೆ ಎಂಬ ಅಲ್ಪ ಸಹಾಯದೊಂದಿಗೆ ನಮ್ಮ ಶಕ್ತಿಗೆ ಅನುಸಾರವಾಗಿ ನಾವು ಸೇವೆ ಮಾಡಿದ್ದೇವೆ. ಇದರೊಂದಿಗೆ ಕನಿಷ್ಟ ದುಡಿಮೆಯನ್ನು ಕಳೆದುಕೊಂಡು ಅನ್ನಕ್ಕೂ ಪರದಾಡುವ ಪರಿಸ್ಥಿತಿಯಲ್ಲಿ ಇರುವ ನಮ್ಮ ಅಕ್ಕಪಕ್ಕದ ವಿಕಲಚೇತನರಿಗೂ ನಮ್ಮ ಕುಟಂಬದವರೆಂಬ ಭಾವದೊಂದಿಗೆ ಕರವೇ ಅವರ ನೆರವಿಗೆ ದಾವಿಸಿದ್ದೇವೆ. ಈ ಮೂಲಕ ಉಳ್ಳವರು ಅವರವರ ವ್ಯಾಪ್ತಿಯಲ್ಲಿ ಸಂಕಷ್ಟಕ್ಕೆ ಒಳಗಾದವರಿಗೆ ಅವರ ಶಕ್ತಿ ಅನುಸಾರವಾಗಿ ಅವರ ನೆರವಿಗೆ ಬಂದರೆ ಬಹುತೇಕ ಸಮಸ್ಯೆಗಳನ್ನು ನಿವಾರಿಸಬಹುದಾಗಿದೆ ಎಂದು ಅವರು ಕಿವಿ ಮಾತು ಹೇಳಿದರು.
ಈ ಸಂದರ್ಭದಲ್ಲಿ ಕರವೇ ಕೊನಘಟ್ಟ ಗ್ರಾ.ಪಂ ಉಪಾಧ್ಯಕ್ಷ ಸೋಮಶೇಖರ್, ಪಿಡಿಓ ರಘು, ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಶೆಟ್ಟಿ, ಯಲಹಂಕ ತಾಲೂಕು ಅಧ್ಯಕ್ಷ ಜಯಂತ್, ತಾಲೂಕು ಅಧ್ಯಕ್ಷ ಎಚ್.ಎಸ್.ವೆಂಕಟೇಶ್, ಕಾರ್ಯದರ್ಶಿ ಅಮ್ಮು, ಉಪಾಧ್ಯಕ್ಷ ವಕೀಲ ಆನಂದ್, ಪ್ರಧಾನ ಕಾರ್ಯದರ್ಶಿ ಎಸ್‌ಎಲ್‌ಎನ್ ವೇಣು, ತಾಲೂಕು ಕಾರ್ಮಿಕ ಘಟಕದ ಅಧ್ಯಕ್ಷ ರಾಜಘಟ್ಟ ಮಹೇಶ್, ಸಂಚಾಲಕ ಸೊಣ್ಣಮಾರನಹಳ್ಳಿ ಕೆ.ಆರ್.ಮಂಜುನಾಥ್ ಮತ್ತಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….