ದೊಡ್ಡಬಳ್ಳಾಪುರ: ಕೌಟುಂಬಿಕ ಕಲಹದ ಹಿನ್ನೆಲೆ ಸ್ವಂತ ಅಕ್ಕನ ಗಂಡನನ್ನೆ ಯುವಕನೋರ್ವ ಹತ್ಯೆ ಮಾಡಿ ಪರಾರಿಯಾಗಿರುವ ಘಟನೆ ನಗರದ ಕರೇನಹಳ್ಳಿಯಲ್ಲಿ ಸಂಭವಿಸಿದೆ.
ಮೃತನನ್ನು ಬಾಗೇಪಲ್ಲಿ ಮೂಲದ ನವೀನ್ (30 ವರ್ಷ) ಎಂದು ಗುರುತಿಸಲಾಗಿದೆ.
ಘಟನೆ ವಿವರ: ಮೃತ ನವೀನ್ ಕರೇನಹಳ್ಳಿ ನಿವಾಸಿ ಮಂಜುಳ(ಹೆಸರು ಬದಲಿಸಲಾಗಿದೆ) ಎನ್ನವವರೊಂದಿಗೆ ವಿವಾಹವಾಗಿದ್ದು, ಕೌಟುಂಬಿಕ ಕಲಹದ ಕಾರಣ ಆಕೆ ತವರುಮನೆ (ಕರೇನಹಳ್ಳಿ) ಸೇರಿದ್ದಾರೆ. ಈ ನಡುವೆ ಮಕ್ಕಳ ವಿಚಾರ ಹಾಗೂ ಸಂಸಾರ ಸರಿ ಪಡಿಸುವ ವಿಚಾರವಾಗಿ ರಾಜಿ ಪಂಚಾಯಿತಿ ಪ್ರಯತ್ನ ಮುಂದುವರೆದಿದ್ದು, ಶನಿವಾರ ರಾತ್ರಿ ರಾಜಿಗೆಂದು ಕರೇನಹಳ್ಳಿಗೆ ನವೀನ್ ಬಂದಿದ್ದಾನೆ, ಅಲ್ಲದೆ ಈ ವೇಳೆಯು ಮಡದಿಯ ಕುಟುಂಬದವರೊಂದಿಗೆ ಜಗಳ ಮಾಡಿದ್ದಾನೆ ಎನ್ನಲಾಗಿದೆ.
ಭಾನುವಾರ ಬೆಳಗ್ಗೆ ಸ್ಥಳೀಯ ಹಿರಿಯರ ಸಮ್ಮುಖದಲ್ಲಿ ರಾಜಿ ಪಂಚಾಯಿತಿ ನಡೆಸಲು ನವೀನ್ ಮಡದಿಯ ಪೋಷಕರು ಸಿದ್ದತೆಯ ಬೆನ್ನಲ್ಲೆ, ಕರೇನಹಳ್ಳಿಯ ಹೊರಭಾಗದಲ್ಲಿ ನವೀನ್ ಮಡದಿಯ ತಮ್ಮ ವೆಂಕಟೇಶ್ ಹಾಗೂ ಸಂಗಡಿಗರು ಹತ್ಯೆ ಮಾಡಿ ಪರಾರಿಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ಹರಿತಲೇಖನಿಗೆ ತಿಳಿಸಿವೆ.
ಹತ್ಯೆ ನಡೆಯುವ ಮುನ್ನಾ ಈ ಸ್ಥಳದಲ್ಲಿ ಹುಡುಗರು ಆಟವಾಡುತ್ತಿದ್ದು, ಹತ್ಯೆ ಕಂಡು ಆತಂಕಗೊಂಡು ಓಡಿಓಗಿದ್ದಾರೆ ಎನ್ನಲಾಗಿದೆ. ಅಲ್ಲದೆ ಹಾಡುಹಗಲೇ ಹತ್ಯೆ ನಡೆದಿರುವ ಹಿನ್ನೆಲೆ ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದಾರೆ.
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿಯೆ ಹತ್ಯೆ ನಡೆದಿದೆ ಎಂದು ಪೊಲೀಸರು ಶಂಕಿಸಿದ್ದು, ತಲೆ ಮರೆಸಿಕೊಂಡಿರುವ ಆರೋಪಿ ವೆಂಕಟೇಶ್ ಪತ್ತೆಗೆ ಪೊಲೀಸರು ಬಲೆ ಬೀಸಿದ್ದು, ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..