ಟೋಕಿಯೋ: ಒಲಿಂಪಿಕ್ಸ್‌ನಲ್ಲಿ ಜಾವೆಲಿನ್ ಥ್ರೋ ಫೈನಲ್ನಲ್ಲಿ ಎದುರಾಳಿಯನ್ನು ಸೋಲಿಸುವ ಮೂಲಕ ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದಿದ್ದಾರೆ.
ಈ ಮೂಲಕ ಭಾರತಕ್ಕೆ ಏಳನೇ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ತಂದಿದ್ದಾರೆ. ಫೈನಲ್ನಲ್ಲಿ 87.58 ಮೀ. ದೂರಕ್ಕೆ ಜಾವೆಲಿನ್ ಎಸೆದು ಅಗ್ರಸ್ಥಾನ ಪಡೆದುಕೊಳ್ಳುವ ಮೂಲಕ ನೀರಜ್ ಚಿನ್ನದ ಪದಲ ಗೆದ್ದಿದ್ದಾರೆ.
ಈ ಹಿಂದೆ ಸೆಮಿ ಫೈನಲ್ನಲ್ಲಿ ನೀರಜ್ 86.59 ಮೀ. ದೂರಕ್ಕೆ ಜಾವೆಲಿನ್ ಎಸೆದು ಅಗ್ರಸ್ಥಾನ ಪಡೆದಿದ್ದರು. ಈ ಲಯವೂ ಫೈನಲ್‌ನಲ್ಲೂ ಮುಂದುವರಿದಿದೆ.
ಅಗ್ರ 5 ಸ್ಥಾನಗಳಲ್ಲಿದ್ದ ಅಥ್ಲೀಟ್‌ಗಳ ಪೈಕಿ ನೀರಜ್ ಮಾತ್ರ ಫೈನಲ್ನಲ್ಲಿ ಗೆಲ್ಲುವ ಮೂಲಕ ಚಿನ್ನದ ಪದಕ ತನ್ನದಾಗಿಸಿಕೊಂಡಿದ್ದಾರೆ.
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ನೀರಜ್ ಚೋಪ್ರಾ ಶನಿವಾರ ಇತಿಹಾಸವನ್ನು ಬರೆದರು, ಏಕೆಂದರೆ ಅವರು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ ಮೊದಲ ಚಿನ್ನದ ಪದಕವನ್ನು ಗೆದ್ದಿದ್ದಾರೆ ಮತ್ತು ಮೆಗಾ-ಈವೆಂಟ್‌ನಲ್ಲಿ ಅಥ್ಲೆಟಿಕ್ಸ್‌ನಲ್ಲಿ ಪದಕ ಗೆಲ್ಲುವ ತನ್ನ ರಾಷ್ಟ್ರದ 100 ವರ್ಷಗಳ ಕಾಯುವಿಕೆಯನ್ನು ಕೊನೆಗೊಳಿಸಿದರು.
ಇದಷ್ಟೇ ಅಲ್ಲ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಚಿನ್ನ ಗೆದ್ದ ಮೊದಲ ಅಥ್ಲೀಟ್ ಎನಿಸಿಕೊಂಡರು ಮತ್ತು ಮೆಗಾ ಈವೆಂಟ್‌ನಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದ ಎರಡನೇ ವೈಯಕ್ತಿಕ ಕ್ರೀಡಾಪಟು ಎನಿಸಿಕೊಂಡರು. ಶೂಟರ್ ಅಭೀವನ್ ಬಿಂದ್ರಾ ಅವರು ಭಾರತದ ಮೊದಲ ಚಿನ್ನದ ಅಥ್ಲೀಟ್ ಆಗಿದ್ದರು. 2008 ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಬಿಂದ್ರಾ ಗೆದ್ದಿದ್ದರು.(ಪೊಟೋಕೃಪೆ:RB)
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ಶೇರ್ ಮಾಡಿ.