ನೆಲಮಂಗಲ: ಹುಡುಗನೊಂದಿಗೆ ಓಡಾಡುತ್ತಿದ್ದ ಮಗಳಿಗೆ, ಓದುವ ವಯಸ್ಸಿನಲ್ಲಿ ಪ್ರೀತಿ ಮಾಡಬೇಡ ಎಂದು ಬುದ್ದಿಮಾತನ್ನ ಪೋಷಕರು ಹೇಳಿದಕ್ಕೆ ಮನನೊಂದ ಯುವತಿ ನೇಣಿಗೆ ಶರಣಾಗಿದ್ದಾರೆ.
ಬೆಂಗಳೂರು ಉತ್ತರ ತಾಲೂಕಿನ ಹೆಸರಘಟ್ಟ ಆಚಾರ್ಯ ಕಾಲೇಜ್ ಬಳಿಯ ಪಿಜಿಯಲ್ಲಿ ಘಟನೆ ನಡೆದಿದ್ದು, ಆಚಾರ್ಯ ಕಾಲೇಜ್ ವಿಧ್ಯಾರ್ಥಿನಿ ಅನಾಗ ಗೋಪಾ(19) ಆತ್ಮಹತ್ಯೆಗೆ ಶರಣಾದವರೆನ್ನಲಾಗಿದೆ.
ಕೇರಳ ಮೂಲದ ಮೃತ ಯುವತಿ, ಕಾಲೇಜು ಬಳಿಯ ಪಿಜಿಯೊಂದರಲ್ಲಿ ವಾಸವಿದ್ದು, ಆಚಾರ್ಯ ಕಾಲೇಜ್ ನಲ್ಲಿ ಮೊದಲ ವರ್ಷದ ಬಿಎ ವ್ಯಾಸಂಗ ಮಾಡುತ್ತಿದ್ದರು.
ಯುವತಿ ಪ್ರಿಯಕರನೊಂದಿಗೆ ಸುತ್ತಾಡುತ್ತಿರುವ ವಿಷಯ ಆಕೆಯ ಪೋಷಕರಿಗೆ ತಿಳಿದು, ಮಗಳಿಗೆ ಪ್ರೀತಿ ಕೂಪದಲ್ಲಿ ಬೀಳದಂತೆ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.
ಈ ವಿಷಯಕ್ಕೆ ಮನನೊಂದ ಯುವತಿ ಪಿಜಿ ಕೊಟ್ಟಡಿಯಲ್ಲಿ ಫ್ಯಾನ್ ಗೆ ವೇಲ್ ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..