ದೊಡ್ಡಬಳ್ಳಾಪುರ: ಕರೊನಾ ಸೋಂಕು ಹರಡುವುದನ್ನು ತಡೆಯುವ ಸಲುವಾಗಿ ಸೆ.7ರವರೆಗೂ ಮುಜರಾಯಿ ಹಾಗೂ ಖಾಸಗಿ ದೇವಾಲಯಗಳನ್ನು ಶನಿವಾರ, ಭಾನುವಾರ ಹಾಗೂ ವಿಶೇಷ ರಜೆ ದಿನಗಳಂದು ಬಂದ್ ಮಾಡುವಂತೆ ಜಿಲ್ಲಾಧಿಕಾರಿಗಳು ಆದೇಶ ಮಾಡಿರುವ ಹಿನ್ನೆಲೆಯಲ್ಲಿ ಶ್ರಾವಣ ಮಾಸದ ಕೊನೆಯ ಶನಿವಾರವಾದ ಇಂದು ತಾಲ್ಲೂಕಿನ ಎಲ್ಲಾ ದೇವಾಲಯಗಳ ಬಾಗಿಲು ಬಂದ್ ಮಾಡಲಾಗಿತ್ತು.
ತಾಲ್ಲೂಕಿನ ಕನಸವಾಡಿಯಲ್ಲಿನ ಶನಿಮಹಾತ್ಮ ದೇವಾಲಯದಲ್ಲಿ ಶ್ರಾವಣ ಮಾಸದ ಕೊನೆಯ ಶನಿವಾರದ ಅಂಗವಾಗಿ ಬೆಳಗಿನ ಜಾವವೇ ದೇವರಿಗೆ ಅಭಿಷೇಕ, ಮಹಾಮಂಗಳರಾತಿ ನಂತರ ದೇವಾಲಯದ ಬಾಗಿಲು ಬಂದ್ ಮಾಡಲಾಗಿತ್ತು. ಹೀಗಾಗಿ ದೇವರ ದರ್ಶನಕ್ಕೆ ಆಗಮಿಸಿದ್ದ ನೂರಾರು ಜನ ಭಕ್ತಾಧಿಗಳು ದೇವರ ದರ್ಶನ ಭಾಗ್ಯ ಇಲ್ಲದೆ ದೇವಾಲಯದ ಮುಖ್ಯಧ್ವಾರಕ್ಕೆ ಪೂಜೆ ಸಲ್ಲಿಸಿದರು.
ದೇವಾಲಯ ಗೋಪುರ ಮುಂದಿನ ಅಗ್ನಿಕುಂಡಕ್ಕೆ ಎಳ್ಳು, ಎಣ್ಣೆಬತ್ತಿ ಸಮರ್ಪಿಸಿ ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಹಾಗೆಯೇ ಘಾಟಿ ಕ್ಷೇತ್ರದಲ್ಲಿನ ಸುಬ್ರಹ್ಮಣ್ಯಸ್ವಾಮಿ ದೇವಾಲಯ ಸೇರಿದಂತೆ ತಾಲೂಕಿನ ದೇವಾಲಯಗಳ ಬಾಗಿಲು ಸಹ ಬಂದ್ ಮಾಡಿದ್ದು ಚುನಾವಣೆ, ರಾಜಕೀಯ ಸಭೆಗಳಿಗಿರದ ಕೋವಿಡ್ ಆತಂಕ ದೇವರಿಗೆ ಮಾತ್ರ ಏಕೆ ಎಂಬ ಆಕ್ರೋಶ ಭಕ್ತರದ್ದಾಗಿತ್ತು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..