ಚಿಕ್ಕಬಳ್ಳಾಪುರ: ಕೃಷಿ ಹೊಂಡದಲ್ಲಿ ಮುಳುಗಿ ಇಬ್ಬರು ಬಾಲಕರು ಸಾವನ್ನಪ್ಪಿರುವ ದಾರುಣ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ವಾಟದಹೊಸಹಳ್ಳಿ ಬಳಿಯ ಹಳೆ ಊರು ಗ್ರಾಮದಲ್ಲಿ ನಡೆದಿದೆ.
ವಾಟದಹೊಸಹಳ್ಳಿ ಗ್ರಾಮದ 14 ವರ್ಷದ ಲಿಖಿತ್ ಹಾಗೂ 13 ವರ್ಷದ ಹರಿ ಚರಣ್ ಮೃತರು.
ಮೃತ ಬಾಲಕರು ಭಾನುವಾರ ಮಧ್ಯಾಹ್ನ 3 ಗಂಟೆ ವೇಳೆ ಈಜಾಡಲೆಂದು ಗ್ರಾಮದ ಹೊರವಲಯದಲ್ಲಿನ ಜಯಣ್ಣ ಎಂಬುವವರಿಗೆ ಸೇರಿದ ಕೃಷಿಹೊಂಡದ ಬಳಿ ತೆರಳಿದ್ದಾರೆ. ಆದರೆ ಈಜು ಬಾರದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಸಂಜೆಯಾದರೂ ಬಾಲಕರು ಮನೆಗೆ ಬಾರದ ಕಾರಣ ಹುಡುಕಾಡಿದಾಗ ಕೃಷಿ ಹೊಂಡದಲ್ಲಿ ಬಾಲಕರ ಮೃತ ದೇಹಗಳು ಪತ್ತೆಯಾಗಿವೆ.
ಇನ್ನೂ ಗ್ರಾಮಸ್ಥರೇ ಮೃತದೇಹಗಳನ್ನ ಹೊರತೆಗೆದು ಮೃತರ ಮನೆ ಬಳಿ ತೆಗೆದುಕೊಂಡು ಹೋಗಿದ್ದು. ಮೃತರ ಆಂಕ್ರಂದನ ಮುಗಿಲುಮುಟ್ಟಿದೆ.
ವಿಷಯ ತಿಳಿದ ಗೌರಿಬಿದನೂರು ಸಿಪಿಐ ಶಶಿಧರ್ ಹಾಗೂ ಗ್ರಾಮಾಂತರ ಠಾಣಾ ಪಿಎಸ ಐ ವಿಜಯ್ ಮೃತ ಕುಟುಂಬಸ್ಥರ ಮನವೊಲಿಸಿ ಮೃತದೇಹಗಳನ್ನ ತಡರಾತ್ರಿ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಿ ಮರಣೋತ್ತರ ಪರೀಕ್ಷೆ ನಡೆಸಲು ಮುಂದಾಗಿದ್ದಾರೆ.
ಅಂದ ಹಾಗೆ ಇಬ್ಬರು ಬಾಲಕರು ಅಕ್ಕಪಕ್ಕದ ಮನೆಯವರಾಗಿದ್ದು ಸ್ನೇಹಿತರಾಗಿದ್ರು..ಸಾವಿನಲ್ಲೂ ಸಹ ಇಬ್ಬರು ಸ್ನೇಹಿತರು ಒಂದಾಗಿ ಜೀವ ಬಿಟ್ಟಿದ್ದಾರೆ. ಗಣೇಶನ ವಿಸರ್ಜನೆಗೆ ಕೃಷಿ ಹೊಂಡ ನೋಡಿ ಬರಲು ತೆರಳಿರಬೇಕು ಅಂತ ಸಹ ಕೆಲ ಗ್ರಾಮಸ್ಥರು ಊಹಿಸಿದ್ದಾರೆ.
ಘಟನೆ ಕುರಿತು ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..